ಯೆಮಾನ್, ಫೆ 06 (DaijiworldNews/MS): ಯೆಮಾನ್ ದೇಶದ ನೂತನ ಪ್ರಧಾನಿಯಾಗಿ ವಿದೇಶಾಂಗ ಸಚಿವರಾಗಿದ್ದ ಅಹ್ಮದ್ ಅವದ್ ಬಿನ್ ಮುಬಾರಕ್ ಅವರು ನೇಮಕವಾಗಿದ್ದಾರೆ.
ಪ್ರಸ್ತುತ ವಿದೇಶಾಂಗ ಸಚಿವರಾಗಿರುವ ಅಹಮದ್ ಅವದ್ ಬಿನ್ಮುಬಾರಕ್ ಅವರನ್ನು ನೇಮಿಸುವುದಾಗಿ ಅಲ್ಲಿನ ಅಧ್ಯಕ್ಷೀಯ ನಾಯಕತ್ವ ಮಂಡಳಿ ಘೋಷಣೆ ಮಾಡಿದೆ
ಕೆಂಪು ಸಮುದ್ರದಲ್ಲಿನ ಇತ್ತೀಚಿನ ಸಂಘರ್ಷ ಮತ್ತು ಅಮೆರಿಕ-ಬ್ರಿಟನ್ ಜಂಟಿಯಾಗಿ ಯೆಮಾನ್ ಬೆಂಬಲಿತ ಹೌತೀಸ್ ಉಗ್ರರ ಮೇಲೆ ನಡೆಸುತ್ತಿರುವ ದಾಳಿಯ ನಡುವೆಯೇ ಹಾಲಿ ಪ್ರಧಾನಿ ಮಯೀನ್ ಅಬ್ದುಲ್ಮಲಿಕ್ ಸೈಯದ್ನ್ನು ಪಟ್ಟದಿಂದ ಕೆಳಗಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಅಹ್ಮದ್ ಮುಬಾರಕ್ ಅವರು 2015 ರಲ್ಲಿ ಆಗಿನ ಅಧ್ಯ ಕ್ಷರಾಗಿದ್ದ ‘ಅಬ್ದ್-ರಬ್ಬು ಮನ್ಸೂರ್ ಹಾಡಿ’ ಅವರೊಂದಿಗೆ ಅಧಿಕಾರಕ್ಕಾಗಿ ಹೋರಾಟ ನಡೆಸಿದ್ದರು. ಈ ವೇಳೆ ದೇಶದ ಇರಾನ್-ಸಂಘಟಿತ ಹೌತಿಗಳು ಅವರನ್ನು ಅಪಹರಿಸಿದ್ದರು. ಹೌತಿಗಳಿಂದ ಬಿಡುಗಡೆಯಾಗಿ ಬಂದ ಬಳಿಕ ಯಮೆನ್ ರಾಜಕೀಯದಲ್ಲಿ ಅಹಮದ್ ಮುನ್ನಲೆಗೆ ಬಂದಿದ್ದರು.