ಆಫ್ರಿಕಾ,ಜ 29 (DaijiworldNews/MS): ಆಫ್ರಿಕಾದ ತೈಲ ಸಮೃದ್ಧ ಪ್ರದೇಶವಾದ ಅಬ್ಯೆಯಿಯಲ್ಲಿ ಬಂದೂಕುಧಾರಿಗಳು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದು, ವಿಶ್ವಸಂಸ್ಥೆಯ ಶಾಂತಿಪಾಲಕ ಸೇರಿದಂತೆ ಸೇರಿದಂತೆ ಕನಿಷ್ಠ 52 ಜನರು ಸಾವನ್ನಪ್ಪಿದ್ದಾರೆ ಮತ್ತು 64 ಜನರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಡಾನ್ ಮತ್ತು ದಕ್ಷಿಣ ಸುಡಾನ್ ಎರಡರಿಂದಲೂ ಹಕ್ಕು ಸಾಧಿಸಿದ ತೈಲ-ಸಮೃದ್ಧ ಪ್ರದೇಶವಾದ ಅಬೈಯಲ್ಲ, ಈ ಘಟನೆ ನಡೆದಿದ್ದು, ಶನಿವಾರ ಸಂಜೆ ದಾಳಿಯ ಉದ್ದೇಶವು ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ಇದು ಭೂ ವಿವಾದದ ಸುತ್ತ ಸುತ್ತುತ್ತದೆ ಎಂದು ಶಂಕಿಸಲಾಗಿದೆ.
ದಾಳಿಯ ಹಿಂದಿನ ಸ್ಪಷ್ಟ ಉದ್ದೇಶ ತಿಳಿದುಬಂದಿಲ್ಲದಿದ್ದರೂ, ಭೂ ವಿವಾದದ ಹಿನ್ನಲೆಯಲ್ಲಿ ನೆರೆಯ ವಾರಾಪ್ ರಾಜ್ಯದ ಟ್ವಿಕ್ ಸಮುದಾಯದ ಮತ್ತು ಅಬೈಯ ಎನ್ಗೊಕ್ ಡಿಂಕಾ ಸಮುದಾಯ ನಡುವಿನ ಘರ್ಷಣೆಯ ಪರಿಣಾಮ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಪ್ರದೇಶದಲ್ಲಿ ಮಾರಣಾಂತಿಕ ಜನಾಂಗೀಯ ಹಿಂಸಾಚಾರ ಸಾಮಾನ್ಯವಾಗಿದೆ. ಶಾಂತಿಪಾಲನಾ ಸಿಬ್ಬಂದಿಯನ್ನು ಕೊಂದ ಹಿಂಸಾಚಾರವನ್ನು ವಿಶ್ವಸಂಸ್ಥೆಯ ಮಧ್ಯಂತರ ಭದ್ರತಾ ಪಡೆ (ಯುನಿಸ್ಫಾ) ಖಂಡಿಸಿದೆ.