ಬ್ರಿಟನ್, ಜ 28 (DaijiworldNews/RA): ಬ್ರಿಟಿಷ್ ತೈಲ ಟ್ಯಾಂಕರ್ಗಳನ್ನು ಹೊತ್ತು ಬರುತ್ತಿದ್ದ ಮಾರ್ಲಿನ್ ಲುವಾಂಡಾ ಹಡಗಿನ ಮೇಲೆ ಶುಕ್ರವಾರ ಯೆಮೆನ್ ನ ಹೌತಿ ಬಂಡುಕೋರರು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿಗೆ ಒಳಗಾದ ಈ ಹಡಗಿನಲ್ಲಿ 21 ಭಾರತೀಯ ಸಿಬ್ಬಂದಿಗಳು, ಒಬ್ಬ ಬಾಂಗ್ಲಾದೇಶದ ಸಿಬ್ಬಂದಿ ಇದ್ದರು ಅನ್ನುವ ಮಾಹಿತಿ ಲಭ್ಯವಾಗಿದೆ.ಮಾರ್ಲಿನ್ ಲುವಾಂಡಾ ಹಡಗು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಕುರಿತು ಬಗ್ಗೆ ಭಾರತೀಯ ನೌಕದಳಕ್ಕೆ ಕರೆ ಬಂದಿದ್ದು, ಈ ಕರೆಗೆ ಭಾರತೀಯ ನೌಕಾಪಡೆಯು ಸ್ಪಂದಿಸಿದೆ.
ಭಾರತೀಯ ನೌಕಾಪಡೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ವ್ಯಾಪಾರಿ ಹಡಗುಗಳನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ ಎಂದು ಯುಎಸ್ ಹೇಳಿದ್ದಾರೆ.
ಈ ದಾಳಿಯ ಹೊಣೆಯನ್ನು ಯೆಮೆನ್ ನ ಹೌತಿ ಬಂಡುಕೋರರು ಹೊತ್ತುಕೊಂಡಿದ್ದು,ಯೆಮೆನ್ ನ ಹೌತಿ ಬಂಡುಕೋರರೇ ನಡೆಸಿದ್ದಾರೆ ಎಂದು ಯುನೈಟೆಡ್ ಸ್ಟೇಟ್ಸ್ ದೃಢಪಡಿಸಿದೆ.
ಜನವರಿ 26 ರಂದು, ಸರಿಸುಮಾರು ರಾತ್ರಿ 7:45 ವೇಳೆ ಇರಾನ್ ಬೆಂಬಲಿತ ಹೌತಿ ಭಯೋತ್ಪಾದಕರು ಮಾರ್ಲಿನ್ ಲುವಾಂಡಾ ಹಡಗನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಮಾಡಿದ್ದಾರೆ ಎಂಬ ಮಾಹಿತಿಯನ್ನು US ಸೆಂಟ್ರಲ್ ಕಮಾಂಡ್ ತನ್ನ ಎಕ್ಸ್ನ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.