ಮಾಲ್ಡೀವ್ಸ್,ಜ 24 (DaijiworldNews/PC):ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಹೋದ ಬಳಿಕ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಹಲವು ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಈ ನಡುವೆಯೇ ಚೀನಾದ ಗೂಢಚರ್ಯೆ ಹಡಗೊಂದು ಮಾಲ್ಡೀವ್ಸ್ನತ್ತ ಪ್ರಯಾಣಿಸುತ್ತಿದೆ ಎಂದು ಮಾಹಿತಿಯೊಂದು ದೊರಕಿದೆ.
ಉಪಗ್ರಹ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡಿದ್ದು ಮಾಹಿತಿ ಪ್ರಕಾರ ಭಾರತ ಸೈನ್ಯದ ಉಪಸ್ಥಿತಿಯನ್ನು ವಿರೋಧಿಸುತ್ತಿರುವ ಅಧ್ಯಕ್ಷ ಮಯಿಜು ಚೀನಾ ಪ್ರವಾಸ ಮುಗಿಸಿ ಮರಳಿದ ಬೆನ್ನಲ್ಲೇ ಚೀನಾ ಗುಪ್ತಚರ ಹಡಗು ಮಾಲ್ಡೀವ್ಸ್ನತ್ತ ಪ್ರಯಾಣ ಆರಂಭಿಸಿದೆ.
ಈ ಹಡಗು ಇಂಡೋನೇಷ್ಯಾ ಬಳಿ ಇರುವ ಸುಂಡಾ ಜಲಸಂಧಿಯನ್ನು ದಾಟಿದ್ದು, ಫೆ.8ರ ವೇಳೆಗೆ ಮಾಲ್ಡೀವ್ಸ್ ತಲುಪುವ ಸಾಧ್ಯತೆ ಇದೆ. 2019 ಮತ್ತು 2020ರಲ್ಲೂ ಚೀನಾದ ಹಡಗುಗಳು ಭಾರತದ ಸುತ್ತಮುತ್ತ ಸರ್ವೇಕ್ಷಣೆ ನಡೆಸಿದ್ದವು. ಇದೀಗ ಮಾಲ್ಡೀವ್ಸ್ನಲ್ಲೂ ಚೀನಾ ಬೀಡು ಬಿಡುವುದು ಭಾರತಕ್ಕೆ ಆತಂಕ ಸೃಷ್ಟಿಸಿದೆ.