ಸ್ಯಾನ್ ಫ್ರಾನ್ಸಿಸ್ಕೋ, ಜ 23 (DaijiworldNews/MS): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ದೇಶಕ್ಕೆ ಶಾಶ್ವತ ಸದಸ್ಯ ರಾಷ್ಟ್ರದ ಸ್ಥಾನ ನೀಡದಿರುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ, ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಇದನ್ನು "ಅಸಂಬದ್ಧ" ಎಂದು ಕರೆದಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಯುಎನ್ ಸಂಸ್ಥೆಗಳ ಪರಿಷ್ಕರಣೆಯ ಅಗತ್ಯವಿದೆ. ಸಮಸ್ಯೆಯೆಂದರೆ ಹೆಚ್ಚುವರಿ ಶಕ್ತಿ ಹೊಂದಿರುವವರು ಅದನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಭೂಮಿಯ ಮೇಲೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದರೂ ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನವನ್ನು ಹೊಂದಿಲ್ಲದಿರುವುದು ಅಸಂಬದ್ಧವಾಗಿದೆ" ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆ ಪರಿಷ್ಕರಣೆಯಲ್ಲಿನ ಸಮಸ್ಯೆಯನ್ನು ಎತ್ತಿ ತೋರಿಸಿದ ಅವರು, ಹೆಚ್ಚುವರಿ ಶಕ್ತಿಯನ್ನು ಹೊಂದಿರುವ ದೇಶಗಳು ಅದನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಆಫ್ರಿಕಾವು ಒಟ್ಟಾಗಿ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವವನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಕೂಡ, ವಿಶ್ವಸಂಸ್ಥೆ ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕು ವಿನಾ 80 ವರ್ಷಗಳ ಹಿಂದಿನ ವಿಚಾರಧಾರೆಗಳನ್ನಲ್ಲ ಎಂದು ಹೇಳಿದ್ದಾರೆ.