ಕೆನಡಾ, ಜ 22 (DaijiworldNews/MS): ಶತಕೋಟಿಗೂ ಹೆಚ್ಚು ಭಕ್ತರೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ರಾಮಜನ್ಮ ಭೂಮಿಯಲ್ಲಿನ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ವಿರಾಜಮಾನನಾಗುವ ಸಂದರ್ಭ ಜಗತ್ತಿನಾದ್ಯಂತ ರಾಮನ ಪ್ರತಿಧ್ವನಿ ಮೊಳಗಲಿದೆ.
ಈ ನಡುವೆ ಕೆನಡಾ ಜನವರಿ 22 ರಂದು "ಅಯೋಧ್ಯೆ ರಾಮಮಂದಿರ ದಿನ" ಎಂದು ಘೋಷಿಸಿದೆ. ಹಿಂದೂ ಕೆನಡಿಯನ್ ಫೌಂಡೇಶನ್ (ಎಚ್ಸಿಎಫ್) ಸಂಸ್ಥಾಪಕ ಮತ್ತು ಅಧ್ಯಕ್ಷ ಅರುಣೇಶ್ ಗಿರಿ ಮಾತನಾಡಿ, ವಿಶ್ವ ಜೈನ್ ಸಂಘಟನೆ ಕೆನಡಾ (ವಿಜೆಎಸ್ಸಿ) ಸಹಯೋಗದೊಂದಿಗೆ ಎಚ್ಸಿಎಫ್ ಜನವರಿ 22, 2024 ರಂದು ಮೂರು ನಗರಗಳಾದ ಬ್ರಾಂಪ್ಟನ್, ಓಕ್ವಿಲ್ಲೆ ಮತ್ತು ಬ್ರಾಂಟ್ಫೋರ್ಡ್ನಲ್ಲಿ ಅಯೋಧ್ಯೆ ರಾಮಮಂದಿರ ದಿನವನ್ನು ಯಶಸ್ವಿಯಾಗಿ ಘೋಷಿಸಿದೆ.
ಕೆನಡಾದಲ್ಲಿ ಹಿಂದೂ ಸಮುದಾಯವೂ ದೊಡ್ಡ ಮಟ್ಟದಲ್ಲಿದ್ದು, ಓಕ್ವಿಲ್ಲೆ ಮೇಯರ್ ರಾಬ್ ಬರ್ಟನ್ ಮತ್ತು ಬ್ರಾಂಟ್ಫೋರ್ಡ್ ಮೇಯರ್ ಪ್ಯಾ ಟ್ರಿಕ್ ಬ್ರೌನ್ ಅವರು ಅಯೋಧ್ಯೆಯಲ್ಲಿ ರಾಮಮಂದಿರವು "ಹಿಂದೂ ಸಮುದಾಯದ ದೀರ್ಘಕಾಲದ ಆಶಯ" ಎಂದು ಹೇಳಿದ್ದಾರೆ.
ಕೆನಡಾದ ಹೊರತಾಗಿ, ಮಾರಿಷಸ್ ಕೂಡ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ದಿನವನ್ನುಸ್ಮರಣೀಯವಾಗಿಸಲು, ದೀಪಗಳನ್ನು ಬೆಳಗಿಸಲಾಗುತ್ತದೆ. ಅಷ್ಟೇ ಅಲ್ಲ ಅಲ್ಲಿ ರಾಮಾಯಣ ಪಾರಾಯಣವೂ ನಡೆಯಲಿದೆ.