ಗಾಜಾ, ಜ 21(DaijiworldNews/SK): ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಯುದ್ದವು ದಿನದಿಂದ ದಿನಕ್ಕೆ ವಿನಾಶಕಾರಿ ತಿರುವು ಪಡೆಯುತ್ತಿದೆ. ಈ ಯುದ್ದದಲ್ಲಿ ಇಲ್ಲಿಯ ವರೆಗೆ 25,105 ಮಂದಿ ಸಾವನ್ನಪ್ಪಿದ್ದಾರೆ ವರದಿ ಮೂಲಕ ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹಮಾಸ್ ನೇತೃತ್ವದ ಗಾಜಾ ಆರೋಗ್ಯ ಸಚಿವಾಲಯವು, ಅ.07 ರಿಂದ ಇಸ್ರೇಲ್ ಹಮಾಸ್ ವಿರುದ್ದ ಯುದ್ಧ ಘೋಷಣೆ ಮಾಡಿತ್ತು. ಯುದ್ಧದ ಪರಿಣಾಮ ಇಸ್ರೇಲಿ ಪಡೆ ಹಾಗೂ ಪ್ಯಾಲೆಸ್ತೇನ್ ಸೇನೆಯ ನಡುವೆ ಉಂಟಾದ ಸಂಘರ್ಷದಲ್ಲಿ 62,681 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 178 ಮಂದಿ ಗಾಜಾದಾದ್ಯಂತ ಸಾವನ್ನಪ್ಪಿದ್ದಾರೆ.
ಹಮಾಸ್ ಸರ್ಕಾರದ ಮಾಧ್ಯಮ ಕಚೇರಿಯ ಪ್ರತ್ಯೇಕ ಹೇಳಿಕೆಯ ಪ್ರಕಾರ, ಈ ಯುದ್ದದ ಪರಿಣಾಮ ಇನ್ನು ಹತ್ತಾರು ಜನರು ಅವಶೇಷಗಳಡಿಯಲ್ಲಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.