ವಾಷಿಂಗ್ಟನ್, ಜ 21 (DaijiworldNews/PC): ಅಯೋಧ್ಯಾ ರಾಮ ಪ್ರಾಣಪ್ರತಿಷ್ಠಾ ಸಮಾರಂಭವು ಬಹುತೇಕ ಎರಡನೇ ದೀಪಾವಳಿಯಂತೆ ಭಾಸವಾಗುತ್ತಿದೆ. ನಾನೂ ಈ ದೀಪಾವಳಿಯನ್ನು ಜನವರಿ 22 ರಂದು ಆಚರಿಸಲಿದ್ದೇನೆ ಎಂದು ಆಫ್ರಿಕನ್-ಅಮೆರಿಕನ್ ನಟಿ ಮತ್ತು ಗಾಯಕಿ ಮೇರಿ ಮಿಲ್ಬೆನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ, ರಾಮಮಂದಿರದ ಉದ್ಘಾಟನೆಯ ಬಗ್ಗೆ ಕೇಳಿದಾಗ ಮಾತನಾಡಿದ ಅವರು ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭದ ವೇಳೆ ನಾನು ಭಾರತಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಬೇಸರವಾಗಿದೆ. ಆದರೆ ನಾನು ಖಂಡಿತವಾಗಿಯೂ ಈ ಸಂಭ್ರಮವನ್ನು ಆಚರಿಸುತ್ತೇನೆ. ನಾನು ಕ್ರಿಶ್ಚಿಯನ್ ಮಹಿಳೆ ಆಗಿದ್ದರೂ ಕೆಲವು ಸಮಯದಿಂದ ನಾನು ಹಿಂದೂ ಸಮುದಾಯಕ್ಕೆ ತುಂಬಾ ಹತ್ತಿರವಾಗಿದ್ದೇನೆ. ಹಾಗಾಗಿ ಈ ಸುಂದರ ಕ್ಷಣವನ್ನು ನಾನು ಅನುಭವಿಸುತ್ತೇನೆ ಎಂದು ಹೇಳಿದ್ದಾರೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಎಲ್ಲರೂ ಒಟ್ಟಾಗಿ ಆಚರಿಸುವ ಕ್ಷಣ ಹಾಗೂ ನಂಬಿಕೆಯ ಸೌಂದರ್ಯವಾಗಿದೆ ಎಂದು ಮೇರಿ ಮಿಲ್ಬೆನ್ ಅಯೋಧ್ಯೆ ಕುರಿತು ತಮ್ಮ ಒಲವನ್ನು ವ್ಯಕ್ತಪಡಿಸಿದರು.