ಪಾಕಿಸ್ತಾನ, ಡಿ 05 (DaijiworldNews/PC): ಪಾಕಿಸ್ತಾನ ಮೂಲದ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಭಾರತಕ್ಕೆ ಬೇಕಾಗಿದ್ದ ಈತನನ್ನು ಇತರ 19 ಭಯೋತ್ಪಾದಕರೊಂದಿಗೆ ಹಸ್ತಾಂತರಿಸುವಂತೆ ಭಾರತ 2002 ರಲ್ಲಿ ಪಾಕಿಸ್ತಾನಕ್ಕೆ ಒತ್ತಾಯ ಮಾಡಿತ್ತು. ಮೂಲತಃ ಪಂಜಾಬಿ ನವನು ಈತನು ದುಬೈಗೆ ಹಾರಿ, ಅಲ್ಲಿಂದ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಇವನ ಕುಟುಂಬದವರು ಕೆನಡಾದಲ್ಲಿ ವಾಸಿಸುತ್ತಿದ್ದರು.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಈತ ಭಾರತ ವಿರುದ್ಧ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಎನ್ನಲಾಗಿದೆ. ನಿಷೇಧಿತ ಭಯೋತ್ಪಾದಕ ಗುಂಪುಗಳಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ ಮತ್ತು ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ ಮುಖ್ಯಸ್ಥನಾಗಿದ್ದ ಲಖ್ಬೀರ್ ಸಿಂಗ್ ರೋಡ್ ಹತ್ಯೆಗೀಡಾದ ಖಲಿಸ್ತಾನಿ ಪಾಕಿಸ್ತಾನದಲ್ಲಿ ಆಶ್ರಯವನ್ನೂ ಪಡೆದಿದ್ದ.
ಈ ಉಗ್ರಗಾಮಿ ಸಾವನ್ನಪ್ಪಿರುವುದು ಆತನ ಸಹೋದರ ಜಸ್ಬೀರ್ ಸಿಂಗ್ ರೋಡ್ ಖಚಿತಪಡಿಸಿದ್ದಾರೆ.“ನನ್ನ ಸಹೋದರ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಅಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಆತನ ಪುತ್ರ ನಮಗೆ ತಿಳಿಸಿದ್ದಾನೆ. ಆತ ಮಧುಮೇಹಿಯಾಗಿದ್ದು, ಇಬ್ಬರು ಪುತ್ರರು, ಪುತ್ರಿ ಮತ್ತು ಪತ್ನಿ ಕೆನಡಾದಲ್ಲಿ ವಾಸವಾಗಿದ್ದಾರೆ ಎಂದು ತಿಳಿಸಿರುವುದಾಗಿ ಜಸ್ಬೀರ್ ಹೇಳಿದ್ದಾನೆ.
ಲಖ್ಬೀರ್ ಸಿಂಗ್ ಪಂಜಾಬಿನ ಭಯೋತ್ಪಾದಕ ಚಟುವಟಿಕೆಗಳು, ವಿವಿಐಪಿಗಳು ಮತ್ತು ರಾಜಕೀಯ ನಾಯಕರನ್ನು ಗುರಿಯಾಗಿಸಲು ಗಡಿಯಾಚೆಯಿಂದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ರವಾನೆ ಮಾಡುತ್ತಿದ್ದ. ಇವನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಲ್ಲಿ ‘ವೈಯಕ್ತಿಕ ಭಯೋತ್ಪಾದಕ’ ಪಟ್ಟಿಗೆ ಸೇರಿಸಲಾಗಿತ್ತು. ಇವಿಷ್ಟೇ ಅಲ್ಲದೇ ಈತ ದೇಶದ ವಿವಿಧ ಕಡೆಗಳಲ್ಲಿ ಸ್ಪೋಟದ ಪ್ರಮುಖ ಸಂಚುಕೋರನಾಗಿದ್ದ.