ಟೆಲ್ ಅವೀವ್, ನ 17 (DaijiworldNews/RA) : ಇಸ್ರೇಲ್ ಮೇಲೆ ಅ 7 ರಂದು ಹಮಾಸ್ ಉಗ್ರರು ಭೀಕರ ದಾಳಿ ನಡೆಸಿದ್ದರು. ಈ ಸಂದರ್ಭ ಉಗ್ರರಿಂದ ಅಪಹರಣಕ್ಕೆ ಒಳಗಾದ 19 ವರ್ಷದ ಯೋಧೆಯೊಬ್ಬಳು ಕೊಲೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮೃತ ಯೋಧೆಯನ್ನು ಕಾರ್ಪೋರಲ್ ನೋವಾ ಮಾರ್ಸಿಯಾನೊ ಎಂದು ಗುರುತಿಸಲಾಗಿದ್ದು ಅವರ ಮೃತದೇಹವು ಗಾಜಾಪಟ್ಟಿಯಲ್ಲಿರುವ ಶಿಫಾ ಹಾಸ್ಪಿಟಲ್ ಪಕ್ಕದಲ್ಲಿ ಪತ್ತೆಯಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಯೋದೆಯನ್ನು ಅಪಹರಿಸಿದ ಹಮಾಸ್ ಉಗ್ರರು ಬಳಿಕ ಹತ್ಯೆಗೈದು ದೇಹವನ್ನು ಗಾಜಾದ ಶಿಫಾ ಆಸ್ಪತ್ರೆ ಸಮೀಪದಲ್ಲಿ ಬಿಸಾಡಿದ್ದಾರೆ.ಇದನ್ನು ಇಸ್ರೇನ್ ಸೇನೆ ಪತ್ತೆಮಾಡಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ.
ಅಲ್ಲದೇ ಇಂದು ಗಾಜಾ ಆಸ್ಪತ್ರೆಯ ಸಮೀಪದಲ್ಲೇ ಒತ್ತಾಯಾಳಾಗಿದ್ದ 5 ಮಕ್ಕಳ ತಾಯಿ ಹಮಾಸ್ ಉಗ್ರರಿಂದ ಕೊಲ್ಲಲ್ಪಟ್ಟದ್ದಾರೆ ಎಂದು ಸೇನೆ ಮಾಹಿತಿ ನೀಡಿದೆ.
ಹಮಾಸ್ ತನ್ನ ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಆಸ್ಪತ್ರೆಗಳನ್ನು ಹಮಾಸ್ ಬಳಸುತ್ತಿದೆ ಎಂದು ಸೇನೆ ಹೇಳಿದೆ.
ಸದ್ಯ ಗಾಜಾದಲ್ಲಿರುವ ಅಲ್ ಶಿಫಾ ಆಸ್ಪತ್ರೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಇಸ್ರೇಲ್ ಸೇನೆ, ಆಸ್ಪತ್ರೆಯ ಇಂಚಿಂಚನ್ನೂ ಜಾಲಾಡುತ್ತಿದೆ. ಅಷ್ಟೇ ಅಲ್ಲ, ಅಲ್ ಶಿಫಾ ಆಸ್ಪತ್ರೆ ಮೇಲೆ ಬುಲ್ಡೋಜರ್ಗಳು ನುಗ್ಗಿವೆ ಅಂತ ಹೇಳಲಾಗುತ್ತಿದೆ.