ನವದೆಹಲಿ, ನ.16 (DaijiworldNews/SK): ಕಿಶನ್ಗಂಜ್ನ ಭಾರತ-ನೇಪಾಳ ಗಡಿಯ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಒರ್ವ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗ ಸೇರಿದಂತೆ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಸಶಸ್ತ್ರ ಸೀಮಾ ಬಲ್ ಬಂಧಿಸಿದೆ.
ಬಂಧಿತರನ್ನು ಪಾಕಿಸ್ತಾನದ ಸರಾಫಾ ಮಾರ್ಕೆಟ್ ಕರಾಚಿಯ ಗಹನ್ಮಾರ್ ಸ್ಟ್ರೀಟ್ ನಿವಾಸಿಗಳು ಎಂದು ಗುರುತಿಸಲಾಗಿದೆ.
ಪಾನಿ ಟ್ಯಾಂಕಿ ಬಾರ್ಡರ್ ಔಟ್ಪೋಸ್ಟ್ ನ ಪ್ರತಿನಿತ್ಯ ತಪಾಸಣೆಯ ಸಮಯದಲ್ಲಿ, ಎಸ್ಎಸ್ಬಿ ಸಿಬ್ಬಂದಿ ಮಹಿಳೆ ಮತ್ತು ಆಕೆಯ ಮಗನನ್ನು ತಡೆದು ದಾಖಲೆಗಳನ್ನು ಕೇಳಿದರು. ಅವರು ದಾಖಲೆಗಳನ್ನು ನೀಡಲು ಹಿಂಜರಿದಾಗ ಅವರನ್ನು ಪ್ರಾಥಮಿಕ ತನಿಖೆಗೆ ಒಳಪಡಿಸಿ, ನಂತರ ಹೆಚ್ಚಿನ ತನಿಖೆಗಾಗಿ ಎಸ್ಎಸ್ಬಿ ಅಧಿಕಾರಿಗಳು ಇಬ್ಬರನ್ನು ಕಿಶನ್ಗಂಜ್ ಪೊಲೀಸರಿಗೆ ಹಸ್ತಾಂತರಿಸಿದರು .
ಈ ವೇಳೆ ಅವರು ಪಾಕಿಸ್ತಾನದ ಪ್ರಜೆಗಳು ಎಂದು ತಿಳಿದುಬಂದಿದೆ.ಪಾಕಿಸ್ತಾನದ ಪ್ರಜೆಗಳ ವಿಚಾರಣೆ ನಡೆಯುತ್ತಿದೆ. ಅವರು ಭಾರತಕ್ಕೆ ಪ್ರವೇಶಿಸಲು ಯತ್ನಿಸಿದ ಅವರ ನಿಜವಾದ ಉದ್ದೇಶವನ್ನು ನಾವು ಕಂಡುಕೊಂಡಿಲ್ಲ” ಎಂದು ಕಿಶನ್ಗಂಜ್ನ ಗಲ್ಗಾಲಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರಾಹುಲ್ ಕುಮಾರ್ ತಿಳಿಸಿದ್ದಾರೆ.