ಗಾಜಾ, ನ 12 (DaijiworldNews/RA): ಇಸ್ರೇಲ್ ಹಾಗು ಹಮಾಸ್ ಉಗ್ರರ ಯುದ್ಧ ದಾಹ ಇನ್ನೂ ಕೂಡ ಕೊನೆಗೊಂಡಿಲ್ಲ.ಈಗಾಗಲೇ ಈ ಯುದ್ಧದಲ್ಲಿ ಹಲವಾರು ಮಂದಿ ಅಮಾಯಕರು ಜೀವ ತೆತ್ತಿದ್ದಾರೆ.
ಈ ಮಧ್ಯೆ ಜನಪ್ರಿಯ ಇಸ್ರೇಲ್ ನ ಟಿವಿ ಸರಣಿ ಫೌಡಾ ನಿರ್ಮಾಣ ತಂಡದ ಸದಸ್ಯ ಸಾರ್ಜೆಂಟ್ ಮೇಜರ್ ಜನರಲ್ ಮತನ್ ಮೀರ್ (38) ಎಂಬವರು ಮೃತಪಟ್ಟಿದ್ದಾರೆ.
ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೀನಿಯನ್ ಗುಂಪು ಹಮಾಸ್ ವಿರುದ್ಧದ ಯುದ್ಧದ ಸಮಯದಲ್ಲಿ ನಿಧನ ಹೊಂದಿದ್ದು, ಗಾಜಾದಲ್ಲಿ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರಲ್ಲಿ ಇವರ ಹೆಸರನ್ನು ಪಟ್ಟಿ ಮಾಡಲಾಗಿದೆ ಎಂದು ದಿ ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.
ಇವರ ಸಾವಿನ ಕುರಿತು ಟ್ವಿಟರ್ನಲ್ಲಿ ಎಕ್ಸ್ನಲ್ಲಿ ಫೌಡಾ ಪೋಸ್ಟ್ ಮಾಡಿದ್ದು ನಮ್ಮ ಫೌಡಾ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಮತನ್ ಮೀರ್ ಗಾಜಾದಲ್ಲಿ ಕೊನೆಯುಸಿರೆಳೆದರು ಎಂದು ಹಂಚಿಕೊಳ್ಳಲು ನಮ್ಮ ಮನಸ್ಸು ಛಿದ್ರಗೊಂಡಿದೆ.
ಈ ದುರಂತದ ನಷ್ಟದಿಂದ ಚಿತ್ರತಂಡ ಮತ್ತು ಸಿಬಂದಿ ಎದೆಗುಂದಿದ್ದಾರೆ. ಮತನ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಾವು ನಮ್ಮ ಸಂತಾಪ ವ್ಯಕ್ತಪಡಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹೇಳಿದೆ.
ಹಮಾಸ್ ಉಗ್ರ ಸಂಘಟನೆ ಅಕ್ಟೋಬರ್ 7 ರಂದು ರಾಕೆಟ್ ದಾಳಿ ನಡೆಸಿ 1,400 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ನಂತರ ಗಾಜಾದಲ್ಲಿ ಇಸ್ರೇಲ್ನ ಬೃಹತ್ ಮಿಲಿಟರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಮಾಸ್ ನಿಯಂತ್ರಿತ ಸರ್ಕಾರವು ಇಸ್ರೇಲ್ ನ ನಿರಂತರ ಬಾಂಬ್ ದಾಳಿಯಲ್ಲಿ ಮಕ್ಕಳೂ ಸೇರಿದಂತೆ 10,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಫೌಡಾ ಹೇಳಿದೆ.