ಇಸ್ರೇಲ್: ನ 12 (DaijiworldNews/MR): ಇಸ್ರೇಲ್ ಹಾಗೂ ಹಮಾಸ್ ನಡುವೆ ಕಳೆದ ಒಂದು ತಿಂಗಳಿಂದ ಸಂಘರ್ಷ ನಡೆಯುತ್ತಿದೆ. ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಲು ಆರಂಭಿಸಿದರು. ಬಳಿಕ ಇಸ್ರೇಲ್ ಕೂಡ ಗಾಜಾದ ಮೇಲೆ ನಿರಂತರ ದಾಳಿ ನಡೆಸುತ್ತ ಬಂದಿದೆ. ಈ ದಾಳಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ.
ಇದೀಗ ಹಲವು ದೇಶಗಳು ಕದನ ವಿರಾಮ ಘೋಷಿಸುವಂತೆ ಇಸ್ರೇಲ್ಗೆ ಸಲಹೆ ನೀಡುತ್ತಿದ್ದಾರೆ, ಆದರೆ ಇಸ್ರೇಲ್ ನೀಡಿರುವ ಸಲಹೆಗಳನ್ನು ತಿರಸ್ಕರಿಸಿವೆ, ಯಾವುದೇ ಕಾರಣಕ್ಕೂ ಯುದ್ಧ ನಿಲ್ಲಿಸುವ ಮಾತೇ ಇಲ್ಲ , ಹಮಾಸ್ ಉಗ್ರರನ್ನು ಹತ್ತಿಕ್ಕುವವರೆಗೂ ತಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ತಿಳಿಸಿದ್ದಾರೆ.
ಈ ಹಿಂದೆ ಯುದ್ಧವನ್ನು ನಾವು ಪ್ರಾರಂಭ ಮಾಡಿಲ್ಲ ಆದರೆ ಅಂತ್ಯ ನಮ್ಮಿಂದಲೇ ಆಗುತ್ತದೆ ಎಂದು ಹೇಳಿಕೆ ನೀಡಿದ್ದರು. ನೇತನ್ಯಾಹು ಅವರು, ಗಾಜಾವನ್ನು ಹಮಾಸ್ ಮುಕ್ತಗೊಳಿಸುವುದು ಹಾಗೂ ಇಸ್ರೇಲ್ನಲ್ಲಿ ಭದ್ರತಾ ನಿಯಂತ್ರಣವನ್ನು ಉಳಿಸಿಕೊಳ್ಳಲು ಸಲಹೆ ನೀಡಿದ್ದಾರೆ.
ಹಮಾಸ್, ಗಾಜಾ ಪಟ್ಟಿಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದೆ. ನಾವು ಗೆಲ್ಲುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.