ಇಸ್ಲಾಮಾಬಾದ್, 10 (DaijiworldNews/PC): ಇದೀಗ ಪಾಕಿಸ್ತಾನದಲ್ಲಿ ಲ್ಯಾಮಿನೇಷನ್ ಪೇಪರಿನ ಕೊರತೆ ಉಂಟಾಗಿದ್ದು, ಪಾಸ್ಪೋರ್ಟ್ ತಯಾರಿಸಲೂ ಹಣವಿಲ್ಲದಂತಾಗಿದೆ.
ಹೀಗಾಗಿ ಲ್ಯಾಮಿನೇಷನ್ ಪೇಪರ್ ಕೊರತೆಯಿಂದಾಗಿ ಪಾಕಿಸ್ತಾನಿ ನಾಗರಿಕರು ತಮ್ಮ ಪಾಸ್ಪೋರ್ಟ್ಗಳನ್ನು ಪಡೆಯಲು ಪರಾದಾಡುವ ಸ್ಥಿತಿ ನಿರ್ಮಾಣವಾಗಿದೆ.
ಲ್ಯಾಮಿನೇಷನ್ ಪೇಪರ್ ಪಾಸ್ಪೋರ್ಟ್ಗಳಲ್ಲಿ ಅತ್ಯಗತ್ಯ ಅಂಶವಾಗಿದ್ದು ಇದನ್ನು ಸಾಮಾನ್ಯವಾಗಿ ಫ್ರಾನ್ಸ್ನಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಪಾಕಿಸ್ತಾನದ ಡೈರೆಕ್ಟರೇಟ್ ಜನರಲ್ ಆಫ್ ಇಮಿಗ್ರೇಷನ್ ಮತ್ತು ಪಾಸ್ಪೋರ್ಟ್ಗಳನ್ನು (ಡಿಜಿಐ & ಪಿ) ಉಲ್ಲೇಖಿಸಿ ವರದಿ ನೀಡಿದೆ.
ಇದರಿಂದ ಪಾಕಿಸ್ತಾನದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ಅಲ್ಲಿ ಜನರಿಗೆ ಸಂಕಷ್ಟ ಎದುರಾಗಿದೆ.ಯುಕೆ, ಇಟಲಿ ಹಾಗೂ ವಿವಿಧ ದೇಶಗಳ ವಿಶ್ವವಿದ್ಯಾಲಯಗಳಿಗೆ ದಾಖಲಾದ ಪಾಕಿಸ್ತಾನದ ಹಲವಾರು ವಿದ್ಯಾರ್ಥಿಗಳು ತಮ್ಮ ಪಾಸ್ಪೋರ್ಟ್ಗಳು ಸಮಯಕ್ಕೆ ಸರಿಯಾಗಿ ಸಿಗದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಸರ್ಕಾರಿ ಇಲಾಖೆಯ ಅಸಮರ್ಥತೆಯಿಂದ ಅನ್ಯಾಯವಾಗಿದೆ ಎಂದು ಅವರು ಎಕ್ಸ್ಪ್ರೆಸ್ ಟ್ರಿಬ್ಯೂನ್ಗೆ ತಿಳಿಸಿದ್ದಾರೆ.
ಈ ಬಗ್ಗೆ ತಿಳಿಸಿದ ಪಾಕಿಸ್ತಾನ ಸರ್ಕಾರ ಬಿಕ್ಕಟ್ಟನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದು ಶೀಘ್ರದಲ್ಲೇ ಪರಿಸ್ಥಿತಿಯನ್ನು ಹತೋಟಿಗೆ ತರಲಾಗುವುದು ಎಂದು ಹೇಳಿದೆ