ಕಠ್ಮಂಡು ,ನ 6 (DaijiworldNews/RA): ಭೂಕಂಪ ಪೀಡಿತ ನೇಪಾಳಕ್ಕೆ ತುರ್ತು ಪರಿಹಾರ ಸಾಮಗ್ರಿಗಳನ್ನು ಭಾರತ ಕಳುಹಿಸಿ, ಮಾನವೀಯತೆ ಮೆರೆದಿದೆ.
ಟೆಂಟ್ಗಳು, ಹೊದಿಕೆಗಳು, ಟಾರ್ಪಾಲಿನ್ ಶೀಟ್ಗಳು ಮತ್ತು ಅಗತ್ಯ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿರುವ ಒಟ್ಟು ಸುಮಾರು 10 ಕೋಟಿ ರೂಪಾಯಿ ಮೌಲ್ಯದ ತುರ್ತು ಪರಿಹಾರ ಸಾಮಗ್ರಿಗಳನ್ನು ವಾಯುಪಡೆಯ ವಿಶೇಷ ಸಿ-130 ವಿಮಾನ ಮೂಲಕ ಭಾನುವಾರ ನೇಪಾಳಕ್ಕೆ ಕಳುಹಿಸಿ ಕೊಡಲಾಗಿದೆ.
ಈ ಕುರಿತು ಕಠ್ಮಂಡುವಿನಲ್ಲಿನ ಭಾರತೀಯ ರಾಯಭಾರ ಕಚೇರಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ತುರ್ತು ಪರಿಹಾರ ಸಾಮಗ್ರಿಗಳ ಭಾರತ ರವಾನಿಸಿದ್ದು, ಮೊದಲ ರವಾನೆ ಭಾನುವಾರ ನೇಪಾಲ್ಗುಂಜ್ಗೆ ಆಗಮಿಸಿದ್ದು ಇದರಲ್ಲಿ ಟೆಂಟ್ಗಳು, ಹೊದಿಕೆಗಳು , ಅಗತ್ಯ ಔಷಧಗಳು ಮತ್ತು ಸಂತ್ರಸ್ಥರಿಗೆ ಪೋರ್ಟಬಲ್ ವೆಂಟಿಲೇಟರ್ಗಳಂತಹ ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿದ್ದು 11 ಟನ್ಗೂ ಹೆಚ್ಚು ತುರ್ತು ಪರಿಹಾರ ಸಾಮಗ್ರಿಗಳು ಬಂದಿವೆ ಎಂದು ಹೇಳಿದೆ.
ಈ ಮೂಲಕ ನೇಪಾಳದಲ್ಲಿ ಸಂಭವಿಸಿದ ಭೂಕಂಪ ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್ಗಳನ್ನು ಒದಗಿಸುವಲ್ಲಿ ಭಾರತವು ಮೊದಲು ಸ್ಪಂದಿಸಿದ ದೇಶವಾಗಿದೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ 6.4 ತೀವ್ರತೆಯ ಭೂಕಂಪದ ಪರಿಣಾಮ ಒಟ್ಟು 157 ಜನರನ್ನು ಬಲಿ ತೆಗೆದುಕೊಂಡಿದ್ದು, 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.