ಗಾಜಾ ಪಟ್ಟಿ,ನ 5(DaijiworldNews/RA): ಇಸ್ರೇಲ್ ಹಮಾಸ್ ನಡುವೆ ಸಂಘರ್ಷ ಆರಂಭಗೊಂಡು ಒಂದು ತಿಂಗಳು ಸಮೀಪಿಸುತ್ತಿದ್ದು,ಯುದ್ಧ ಇನ್ನೂ ಕೂಡ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಾಣುತಿಲ್ಲ.
ಇದುವರೆಗೆ ಸಂಘರ್ಷದಲ್ಲಿ ಸುಮಾರು 9,400 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಇಸ್ರೇಲ್ ನಿರಂತರವಾಗಿ ಮುಂದುವರೆಸಿಕೊಂಡು ಬಂದಿದ್ದು ಹಮಾಸ್ ಗೆ ಉಗ್ರಪಡೆಗೆ ಮೈ ಮುಟ್ಟಿ ನೋಡಿಕೊಳ್ಳುವಂತೆ ಏಟಿನ ಮೇಲೆ ಏಟು ಕೊಡ್ತಾ ಇದೆ.
ಅದರೆ ಮುಂದುವರಿದ ಭಾಗವಾಗಿ ಶನಿವಾರ ಮತ್ತೆ ವೈಮಾನಿಕ ದಾಳಿ ನಡೆಸಿದ್ದು ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ರಾತ್ರಿ ಗಾಜಾದ ಮಾಘಜಿ ಶಿಬಿರದ ಮೇಲೆ ಇಸ್ರೇಲಿ ಸೇನಾ ಪಡೆದ ನಡೆಸಿದ ಬಾಂಬ್ ದಾಳಿಗೆ ಮಕ್ಕಳು, ಮಹಿಳೆಯರು ಸೇರಿ ಕನಿಷ್ಠ 51 ಪ್ಯಾಲೆಸ್ಟೀನಿಯಾದವರುಹತ್ಯೆಯಾಗಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ..ಅಷ್ಟು ಮಾತ್ರವಲ್ಲ ದಾಳಿಯಲ್ಲಿ ಹಲವಾರು ವಸತಿ ಗೃಹಗಳು ನಾಶವಾಗಿವೆ.
ಹಮಾಸ್ ಬಂಡುಕೋರರು ಅಡಗಿರುವ ಅಡಗುತಾಣಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.