ಢಾಕಾ, 04 (DaijiworldNews/RA): ಇತ್ತೀಚೆಗೆ ಬಾಂಗ್ಲಾ ದೇಶದಲ್ಲಿ ನಟಿಯೊಬ್ಬಳು ಶವವಾಗಿ ಪತ್ತೆಯಾದ ಘಟನೆ ನಡೆದಿದ್ದು, ಸದ್ಯ ಈಕೆಯ ಸಾವಿನ ಹಿಂದೆ ಅನುಮಾನದ ಶಂಕೆ ಹುಟ್ಟಿಕೊಂಡಿದೆ. ಖ್ಯಾತ ನಟಿ ಹುಮೈರಾ ಹಿಮು(37) ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಆ್ಯಕ್ಟರ್ಸ್ ಇಕ್ವಿಟಿ ಗಿಲ್ಡ್ ನ ಅಧ್ಯಕ್ಷ ಮತ್ತು ನಟ ,ಸ್ನೇಹಿತ ಅಹ್ಸಾನ್ ಹಬೀಬ್ ನಾಸಿಮ್ ನಟಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಅಂತ ಹೇಳಿದ್ದಾರೆ.
ಹುಮೈರಾ ಅವರು ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಅವರನ್ನು ಉತ್ತರ ಅಧುನಿಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆದಾಗಲೇ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ವೈದ್ಯರು ದೇಹವನ್ನು ಪರೀಕ್ಷಿಸಿದ ವೇಳೆ ನಟಿಯ ಕುತ್ತಿಗೆಯಲ್ಲಿ ಮಸುಕಾದ ಗುರುತೊಂದು ಪತ್ತೆಯಾಗಿತ್ತು, ತಕ್ಷಣ ವೈದ್ಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಹಾಜರಿದ್ದ ಹುಮೈರಾ ಹಿಮು ಅವರ ಸ್ನೇಹಿತ ಪೊಲೀಸರು ಬರುವ ಮೊದಲು ಅಲ್ಲಿಂದ ಹೊರಟು ಹೋಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಸದ್ಯ ಪೊಲೀಸರು ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.