ವಾಷಿಂಗ್ಟನ್, ಅ 20(DaijiworldNews/RA): ಹಮಾಸ್ ವಶದಲ್ಲಿರುವ ಅಮೆರಿಕನ್ನರ ಸುರಕ್ಷತೆಯು ನನ್ನ ಆದ್ಯತೆಯಾಗಿದೆ ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಶುಕ್ರವಾರ ಓವಲ್ ಆಫೀಸ್ನಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮಾತನಾಡಿದ ಅವರು, ಹಮಾಸ್ ಭಯೋತ್ಪಾದನೆ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಬ್ಬಾಳಿಕೆಯು ನೆರೆಯ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶಮಾಡಲು ಬಯಸುತ್ತಿದ್ದು, ಅಂತರರಾಷ್ಟ್ರೀಯ ಆಕ್ರಮಣವು ಮುಂದುವರಿದರೆ, ಸಂಘರ್ಷ ಮತ್ತು ಅವ್ಯವಸ್ಥೆ ಪ್ರಪಂಚದ ಇತರ ಭಾಗಗಳಲ್ಲಿ ಹರಡಬಹುದು ಎಂದರು.
ಅಧ್ಯಕ್ಷನಾಗಿ ನನಗೆ ಹಮಾಸ್ ವಶದಲ್ಲಿರುವ ಅಮೆರಿಕನ್ನರ ಸುರಕ್ಷತೆಯು ತಮ್ಮ ಆದ್ಯತೆಯಾಗಿದ್ದು, ಇಸ್ರೇಲ್ ನಲ್ಲಿ ಗಂಭೀರ ನೋವಿನಲ್ಲಿರುವ ಜನರನ್ನು ನಾನು ನೋಡಿದ್ದೇನೆ ಎಂದಿದ್ದಾರೆ.
ಇನ್ನು ಉಕ್ರೇನ್ ಮತ್ತು ಇಸ್ರೇಲ್ ಗೆ ಸಹಾಯ ಮಾಡಲು ಬೃಹತ್ ಧನಸಹಾಯವನ್ನು ಅನುಮೋದಿಸಲು ಕಾಂಗ್ರೆಸ್ ಅನ್ನು ಕೇಳುವುದಾಗಿ ಯುಎಸ್ ಅಧ್ಯಕ್ಷರು ಹೇಳಿದ್ದು, ಜಾಗತಿಕ ನಾಯಕನಾಗಿ ಯುನೈಟೆಡ್ ಸ್ಟೇಟ್ಸ್ ನ ಭವಿಷ್ಯಕ್ಕಾಗಿ ಇದು ಹೂಡಿಕೆಯಾಗಿದೆ. ಇದು ಒಂದು ಸ್ಮಾರ್ಟ್ ಹೂಡಿಕೆಯಾಗಿದ್ದು ಅದು ತಲೆಮಾರುಗಳವರೆಗೆ ಅಮೆರಿಕದ ಜನರ ಭದ್ರತೆಗಾಗಿ ಇದರಿಂದ ಲಾಭವಾಗಲಿದೆ ಎಂದು ಹೇಳಿದ್ದಾರೆ.