ಅ 18 ( DaijiworldNews/SK): ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ (X) "ನಾಟ್ ಎ ಬಾಟ್" ಎಂಬ ಹೊಸ ಚಂದಾದಾರಿಕೆಯನ್ನು ಪರಿಚಯಿಸಿದ್ದು, ಎಕ್ಸ್ ಸೇವೆಗಾಗಿ ಹೊಸ ಬಳಕೆದಾರರಿಗೆ ಶುಲ್ಕ ವಿಧಿಸುವ ಯೋಜನೆಯನ್ನು ದೃಢಪಡಿಸಿದೆ.
ನಾಟ್ ಎ ಬಾಟ್ ಎಂಬ ಹೊಸ ಚಂದಾದಾರಿಕೆಯು ಹೊಸ ಬಳಕೆದಾರರಿಗೆ ಟ್ವೀಟ್ ಗಳು, ರಿಟ್ವೀಟ್ ಗಳು , ಬುಕ್ ಮಾರ್ಕ್ ಗಳು ಮತ್ತು ಹೊಸ ಫೀಚರ್ ಗಳನ್ನು ಪಡೆಯಲು ಇನ್ನೂ ಮುಂದೆ ಬಳಕೆದಾರರು ಶುಲ್ಕವನ್ನು ಪಾವತಿಸಬೇಕು ಆದರೆ ಸದ್ಯಕ್ಕೆ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಶುಲ್ಕ ಅನ್ವಯಿಸುದಿಲ್ಲ ಎಂದು ಕಂಪಿನಿ ಹೇಳಿದೆ.
ಹೊಸ ಚಂದಾದಾರಿಕೆ ಮಾದರಿಯನ್ನು ಸ್ಪ್ಯಾಮ್ , ಪ್ಪಾಟ್ ಫಾರ್ಮ್ ನಲ್ಲಿ ಮ್ಯಾನಿಪುಲೇಷನ್, ಬಾಟ್ ಚಟುವಟಿಕೆಗಳನ್ನು ಕಡಿಮೆ ಮಾಡಲು ಈ ಹೊಸ ಪರೀಕ್ಷೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರಸ್ತುತ ನ್ಯೂಜಿಲೆಂಡ್ ಮತ್ತು ಫಿಲಿಪೈನ್ಸ್ನಲ್ಲಿ ಇದರ ಪ್ರಯೋಗ ಮಾಡಲಾಗುತ್ತಿದ್ದು, ನ್ಯೂಜಿಲಾಂಡ್ ನಲ್ಲಿನ ಬೆಲೆಯು ವರ್ಷಕ್ಕೆ 1.43 NZD ಮತ್ತು ಫಿಲಿಪೈನ್ಸ್ ನಲ್ಲಿ 42.51 PHP ಆಗಿರುತ್ತದೆ. ಆದರೆ ಎಕ್ಸ್ ಚೇಂಜ್ ದರವು ಆಧಾರದ ಮೇಲೆ ದೇಶದಿಂದ ದೇಶಕ್ಕೆ ಬದಲಾಗುತ್ತದೆ ಎಂದು ಎಕ್ಸ್ ತನ್ನ ಬೆಂಬಲ ಖಾತೆಯಿಂದ ಪೋಸ್ಟ್ ಮೂಲಕ ತಿಳಿಸಿದೆ.