ಟೆಲ್ ಅವಿವ್, ಅ 16 (DaijiworldNews/HR): 199 ಜನರನ್ನು ಹಮಾಸ್ ಬಂಡುಕೋರ ಸಂಘಟನೆ ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ತಿಳಿದ್ದಾರೆ.
ಈ ಹಿಂದೆ 155 ಜನರನ್ನು ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಮಿಲಿಟರಿ ವಕ್ತಾರರು ಆರೋಪಿಸಿದ್ದರು. ಅಕ್ಟೋಬರ್ 7ರಂದು ಹಮಾಸ್ ರಾಕೆಟ್ ದಾಳಿ ನಡೆಸಿದ ಬಳಿಕ ಅಕ್ರಮವಾಗಿ ಇಸ್ರೇಲ್ ಗಡಿಯನ್ನು ನುಸುಳಿ ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದರು.
ಇನ್ನು ಯುದ್ಧ ಆರಂಭವಾದ ಬಳಿಕ ಗುಂಡು ಹಾರಿಸಿ, ಇರಿದು ಮತ್ತು ಸುಟ್ಟು 1,400 ಕ್ಕೂ ಜನರನ್ನು ಹಮಾಸ್ ಹತ್ಯೆ ಮಾಡಿದ್ದು, ನಿರಂತರ ಬಾಂಬ್ ದಾಳಿಯು ಹಮಾಸ್ ನೆಲೆಗಳನ್ನು ನಾಶಪಡಿಸಿದೆ.