ಕೆನಡಾ., ಸೆ 26 (DaijiworldNews/HR): ಖಾಲಿಸ್ತಾನ್ ಉಗ್ರನ ಹತ್ಯೆ ನಡೆದ ಬಳಿಕ ಕೆನಡಾ ಮತ್ತು ಭಾರತದ ನಡುವಿನ ಮನಸ್ತಾಪ ಮುಂದುವರಿದ್ದು, ಇದೀಗ ಕೆನಡಾದ ಸಿಖ್ಖರು ಒಟ್ಟಾವಾ, ಟೊರೊಂಟೊ ಮತ್ತು ವ್ಯಾಂಕೋವರ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.
ಪ್ರತಿಭಟನೆ ಸಮಯದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಸುಟ್ಟು ಹಾಕಿದ್ದು, ಪ್ರಧಾನಿ ಮೋದಿ ಅವರ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ.
ಇನ್ನು ಸುಮಾರು 100 ಜನ ಹಾಗೂ ವ್ಯಾಂಕೋವರ್ನಲ್ಲಿ ಸುಮಾರು 200 ಪ್ರತಿಭಟನಾಕಾರರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.