ಇರಾನ್, ಸೆ 14 (DaijiworldNews/HR): ಇರಾನ್ನಲ್ಲಿ ಹೆಣ್ಣುಮಕ್ಕಳು ಹಿಜಾಬ್ನ್ನು ಸರಿಯಾಗಿ ಧರಿಸದಿದ್ದರೆ ಅವರಿಗೆ 60 ಛಡಿ ಏಟು ಹಾಗೂ 10 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಲಿಂಗ ಭೇದ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ.
ಇರಾನ್ನಲ್ಲಿ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಕಡ್ಡಾಯವಾಗಿ ಹಿಜಾಬ್ ಧರಿಸಲೇಬೇಕು, ಇಲ್ಲದಿದ್ದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ, ಇದು ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆಯಷ್ಟೇ ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ.
ಇನ್ನು ಈಗಾಗಲೇ ಇದಕ್ಕಾಗಿ ಸಿದ್ಧತೆಗಳು ಪ್ರಾರಂಭವಾಗಿದ್ದು, ರಸ್ತೆ ರಸ್ತೆಗಳಲ್ಲೂ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ, ನಿಯಮ ಉಲ್ಲಂಘಿಸುವ ಹೆಣ್ಣುಮಕ್ಕಳ ಫೋಟೊವನ್ನು ಸೆರೆ ಹಿಡಿದು, ಮಹಿಳೆಯರನ್ನು ಬಂಧಿಸಲು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ.