ಫ್ರಾನ್ಸ್, ಆ 28 (DaijiworldNews/AK): ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಅಬಯಾ ಡ್ರೆಸ್ (ಬುರ್ಖಾ) ಅವಕಾಶವಿಲ್ಲ ಎಂದು ಫ್ರೆಂಚ್ ಶಿಕ್ಷಣ ಸಚಿವ ಗ್ಯಾಬ್ರಿಯಲ್ ಅಟ್ಟಲ್ ಹೇಳಿದ್ದಾರೆ.
ಈ ಉಡುಪು ಫ್ರಾನ್ಸ್ನ ಶಿಕ್ಷಣದಲ್ಲಿ ಕಟ್ಟುನಿಟ್ಟಾದ ಜಾತ್ಯತೀತ ಕಾನೂನುಗಳನ್ನು ಉಲ್ಲಂಘಿಸಿದೆ . ಶಾಲೆಗಳಲ್ಲಿ ಅಬಾಯಾ ಉಡುಪುಗಳನ್ನು ಧರಿಸುವುದು ಇನ್ನು ಸಾಧ್ಯವಿಲ್ಲ. ಸೆಪ್ಟೆಂಬರ್ 4ರಿಂದ ಶಾಲೆಗಳು ಪುನಾರಾರಂಭಗೊಳ್ಳಲಿದೆ. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗುವುದು” ಎಂದು ಅಟ್ಟಲ್ ಹೇಳಿದರು.
ಈಗಾಗಲೇ ಮಹಿಳೆಯರು ಇಸ್ಲಾಮಿಕ್ ಶಿರವಸ್ತ್ರವನ್ನು ಧರಿಸುವುದನ್ನು ನಿಷೇಧಿಸಿರುವ ಫ್ರೆಂಚ್ ಶಾಲೆಗಳಲ್ಲಿ ಅಬಾಯಾಗಳನ್ನು ಧರಿಸುವುದರ ಕುರಿತ ದೀರ್ಘಕಾಲದ ಚರ್ಚೆಯ ನಂತರ ಕಾನೂನು ತರಲಾಗಿದೆ.
ಇದಕ್ಕಾಗಿ ದೇಶದಲ್ಲಿ ನಿಯಮವನ್ನು ರೂಪಿಸುವುದಾಗಿ ಹೇಳಿದ್ದಾರೆ. ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸಿದಾಗ, ಅವರನ್ನು ನೋಡಿ ಅವರ ಧರ್ಮವನ್ನು ಗುರುತಿಸಲು ಸಾಧ್ಯವಾಗಬಾರದು ಎಂದು ಅಟ್ಟಲ್ ಹೇಳಿದರು.