ಜಾರ್ಜಿಯಾ, ಆ 25 (DaijiworldNews/MS):ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ. 2020ರ ಅಧ್ಯಕ್ಷೀಯ ಚುನಾವನೆಯಲ್ಲಿ ಅಕ್ರಮವೆಸಗಿದ್ದಾರೆ ಎಂಬ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಕೆಲವೇ ಹೊತ್ತಿನಲ್ಲಿ ಜಾಮೀನು ಪಡೆದು ಟ್ರಂಪ್ ಹೊರಬಂದಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿತ್ತು. ಪಿತೂರಿ, ವಂಚನೆ ಯತ್ನ ಸೇರಿದಂತೆ 13 ಪ್ರಕರಣಗಳು ದಾಖಲಾಗಿದ್ದವು. ಈ ಆರೋಪಗಳ ಮೇರೆಗೆ ಜಾರ್ಜಿಯಾ ಪೊಲೀಸರು, ಔಪಚಾರಿಕವಾಗಿ ಟ್ರಂಪ್ರನ್ನು ಬಂಧಿಸಿ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿದ್ದರು. ಆದರೆ $200,000 ಬಾಂಡ್ನ ಇರಿಸಿ 20 ನಿಮಿಷಗಳ ಬಳಿಕ ಜಾಮೀನು ಪಡೆದು ಟ್ರಂಪ್ ಹೊರಬಂದಿದ್ದಾರೆ.
ಜೈಲು ದಾಖಲೆಗಳ ಪ್ರಕಾರ, ಟ್ರಂಪ್ ಅವರನ್ನು ಬಂಧಿಸಲಾಯಿತು ಮತ್ತು ಕೈದಿ ಸಂಖ್ಯೆ P01135809 ಎಂದು ದಾಖಲಿಸಲಾಗಿದೆ
ಬಿಡುಗಡೆ ಬಳಿಕ ನ್ಯೂಜೆರ್ಸಿಗೆ ಹಿಂದಿರುಗುವ ವಿಮಾನಕ್ಕಾಗಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ.
ಸೂಟ್ ಮತ್ತು ಕೆಂಪು ಟೈ ಧರಿಸಿ ಕೋಪದಿಂದ ಕ್ಯಾಮರಾಗೆ ಪೋಸು ಕೊಟ್ಟ ಟ್ರಂಪ್ ಅವರ ಬಂಧನ ಫೋಟೋವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಸ್ವತಃ ಟ್ರಂಪ್ ಅವರೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.