ಕೌಲಾಲಂಪುರ,ಆ 18(DaijiworldNews/Ak): ಮಲೇಷ್ಯಾದ ಸೆಂಟ್ರಲ್ ಸೆಲಂಗೋರ್ ರಾಜ್ಯದಲ್ಲಿ ಲಘು ವಿಮಾನವೊಂದು ಲ್ಯಾಂಡಿಂಗ್ ಮಾಡುವ ವೇಳೆ ಕಾರು ಮತ್ತು ಮೋಟರ್ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಪತನಗೊಂಡಿದ್ದು, ವಿಮಾನದಲ್ಲಿದ್ದ 8 ಪ್ರಯಾಣಿಕರು ಹಾಗೂ ಕಾರು ಮತ್ತು ಮೋಟರ್ ಸೈಕಲ್ ಚಾಲಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ವಿಮಾನ ಅಪಘಾತದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, ಒಬ್ಬರು ಮೋಟಾರ್ ಸೈಕಲ್ ಚಾಲಕ, ಇನ್ನೊಬ್ಬರು ಕಾರು ಚಾಲಕ ಮತ್ತು ವಿಮಾನದಲ್ಲಿದ್ದ 8 ಜನ ಸೇರಿದಂತೆ ಒಟ್ಟು 10 ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಘಟನೆಯ ಬಳಿಕ ಸುರಕ್ಷತಾ ತನಿಖೆಯನ್ನು ಆರಂಭಿಸಲಾಗಿದೆ ಎಂದು ಹೇಳಿದೆ.
ವಿಮಾನವು ಏರ್ ಟ್ರಾಫಿಕ್ ಕಂಟ್ರೋಲ್ ಟವರ್ನೊಂದಿಗೆ ಸಂಪರ್ಕವನ್ನು ಕಡಿದುಕೊಂಡು ಹೆದ್ದಾರಿಯಲ್ಲಿ ಮೋಟಾರ್ ಬೈಕ್ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ. ನಾಗರಿಕ ವಿಮಾನಯಾನ ಪ್ರಾಧಿಕಾರ ಈ ಕುರಿತು ಪ್ರತಿಕ್ರಿಯಿಸಿದ್ದು, ವಿಮಾನ ಲಂಕಾವಿಯಿಂದ ಹೊರಟು ರಾಜಧಾನಿ ಕೌಲಾಲಂಪುರ ಬಳಿಯಿರುವ ಸೆಲಂಗೋರ್ನ ಸುಲ್ತಾನ್ ಅಬ್ದುಲ್ ಅಜೀಜ್ ಷಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎಂದು ತಿಳಿಸಿದೆ.
ವಿಮಾನವು ಸುಬಾಂಗ್ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ನೊಂದಿಗೆ ಮಧ್ಯಾಹ್ನ 2:47ಕ್ಕೆ ಮೊದಲ ಸಂಪರ್ಕವನ್ನು ಸಾಧಿಸಿದ್ದು, 2:48ಕ್ಕೆ ಲ್ಯಾಂಡಿಂಗ್ ಕ್ಲಿಯರೆನ್ಸ್ ನೀಡಲಾಗಿತ್ತು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೊರಾಜ್ಮನ್ ಮಹಮೂದ್ ತಿಳಿಸಿದ್ದಾರೆ.