ಕಾಂಬೋಡಿಯಾ, ಜು 27 (DaijiworldNews/MS): ವಿಶ್ವದ ಅತ್ಯಂತ ದೀರ್ಘಾವಧಿಯ ನಾಯಕರಲ್ಲಿ ಒಬ್ಬರಾದ, 38 ವರ್ಷಗಳ ಕಾಲ ಕಾಂಬೋಡಿಯಾದ ಪ್ರಧಾನಿಯಾಗಿದ್ದ ಹನ್ ಸೇನ್ ಅವರು ಸುಮಾರು ನಾಲ್ಕು ದಶಕಗಳ ಕಠಿಣ ಆಡಳಿತದ ನಂತರ ತಮ್ಮ ಹಿರಿಯ ಮಗನಿಗೆ ರಾಜೀನಾಮೆ ನೀಡಿ ಅಧಿಕಾರವನ್ನು ಹಸ್ತಾಂತರಿಸುವುದಾಗಿ ಬುಧವಾರ ಘೋಷಿಸಿದ್ದಾರೆ.
ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ ಅವರು , " ಆಗಸ್ಟ್ 22 ರ ಸಂಜೆ ಹೊಸ ಸರ್ಕಾರದ ಮುಖ್ಯಸ್ಥರಾಗಿ 45 ವರ್ಷ ವಯಸ್ಸಿನ ಹನ್ ಮಾನೆಟ್ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.
ಕಾಂಬೋಡಿಯನ್ ಪೀಪಲ್ಸ್ ಪಾರ್ಟಿ (CPP) ಭಾನುವಾರ ನಡೆದ ಸಂಸತ್ ಚುನಾವಣೆಯಲ್ಲಿ ಯಾವುದೇ ವಿರೋಧವಿಲ್ಲದೆ ಪ್ರಚಂಡ ವಿಜಯವನ್ನು ಗಳಿಸಿದ್ದು, 125ರ ಲ್ಲಿ 120 ಸ್ಥಾನ ಗೆದ್ದು 82 ಪ್ರತಿಶತ ಮತಗಳನ್ನು ಪಡೆದುಕೊಂಡಿತು.