ಬಾಲಿ, ಜು 23 (DaijiworldNews/MS): ಇಂಡೋನೇಷಿಯಾದ ಖ್ಯಾತ ಬಾಡಿಬಿಲ್ಡರ್, ಫಿಟ್ನೆಸ್ ತರಬೇತುದಾರ ಜಿಮ್ನಲ್ಲಿ 210 ಕೆ.ಜಿ ಭಾರದ ಬಾರ್ಬೆಲ್ ಎತ್ತಲು ಪ್ರಯತ್ನಿಸುತ್ತಿದ್ದಾಗ ದುರಂತ ಅಂತ್ಯ ಕಂಡಿದ್ದಾರೆ.
ಫಿಟ್ನೆಸ್ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದ್ದ ಜಸ್ಟಿನ್ ವಿಕಿ (33) ಮೃತ ಟ್ರೈನರ್. ಇವರು ಜಿಮ್ನಲ್ಲಿ 210 ಕೆ.ಜಿ ಭಾರದ ಬಾರ್ಬೆಲ್ ಎತ್ತಲು ಪ್ರಯತ್ನಿಸುತ್ತಿದ್ದಾಗ ಅದು ಕುತ್ತಿಗೆ ಮೇಲೆ ಬಿದ್ದು ಫಿಟ್ನೆಸ್ ಟ್ರೈನರ್ ಸಾವನ್ನಪ್ಪಿದ್ದಾರೆ
ಪ್ಯಾರಡೈಸ್ ಜಿಮ್ ನಲ್ಲಿ ಭಾರವನ್ನು ಕುಳಿತು ಭುಜಬಲದಿಂದ ಮೇಲಕ್ಕೆ ಎತ್ತುವ ಪ್ರಯತ್ನದಲ್ಲಿದ್ದಾಗ ಅವರು ಲಿಫ್ಟ್ ಅನ್ನು ಪೂರ್ಣಗೊಳಿಸಲು ವಿಫಲರಾದರು. ಈ ಸಂದರ್ಭ ಬಾರ್ಬೆಲ್ ಸಮತೋಲನ ತಪ್ಪಿ ಕುತ್ತಿಗೆ ಮೇಲೆ ಬಿದ್ದು, ಕುತ್ತಿಗೆ ಮುರಿದಿದೆ.
ವಿಕ್ಕಿ ನೆಲಕ್ಕೆ ಬಿದ್ದಾಗ ಅವರ ಹಿಂದೆ ನಿಂತಿದ್ದ ನೆರವು ನೀಡಲು ನೇಮಕಗೊಂಡ ವ್ಯಕ್ತಿ ಕೂಡ ತನ್ನ ಸಮತೋಲನವನ್ನು ಕಳೆದುಕೊಂಡಿದ್ದರು.
ಅಪಘಾತದಲ್ಲಿ ಮೆದುಳಿಗೆ ಸಂಪರ್ಕಿಸುವ ನರಗಳಿಗೂ ಹಾನಿಯಾಗಿದ್ದು, ತಕ್ಷಣವೇ ವಿಕ್ಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅವರು ಬದುಕಲಿಲ್ಲ ಎಂದು ವರದಿ ತಿಳಿಸಿದೆ.ವಿಕಿ ಬಾರ್ಬೆಲ್ ಎತ್ತುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.