ಜೋಹಾನ್ಸ್ಬರ್ಗ್, ಜು 22 (DaijiworldNews/MS): ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ಭೂಗತ ಅನಿಲ ಪೈಪ್ ಸ್ಫೋಟ ಸಂಭವಿಸಿದ್ದು ಈ ಘಟನೆಯಲ್ಲಿ ಓರ್ವ ಮೃತಪಟ್ಟು, 48 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿ ಬಿಡುಗಡೆಗೊಂಡಿದ್ದು,ಸ್ಪೋಟದ ತೀವ್ರತೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಜನನಿಬಿಡವಾಗಿದ್ದ ರಸ್ತೆಯಲ್ಲಿ ಸ್ಫೋಟದ ತೀವ್ರತೆಗೆ ರಸ್ತೆಗಳೇ ಭೂಕಂಪವಾದ ರೀತಿಯಲ್ಲಿ ಮೇಲೆದ್ದಿದ್ದು, ಅಲ್ಲದೆ 23ಕ್ಕೂ ಹೆಚ್ಚಿನ ಕಾರ್ಗಳು ದೂರಕ್ಕೆಸೆಯಲ್ಪಟ್ಟಿವೆ ಎನ್ನಲಾಗಿದೆ.
ಭೂಗತ ಗ್ಯಾಸ್ಸ್ಫೋಟದ ಪರಿಣಾಮ ಅವಘಡ ಸಂಭವಿಸಿದೆ ಎಂಬ ಮಾತು ಸದ್ಯ ಹರಿದಾಡುತ್ತಿದ್ದು, ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಪ್ರಕಟನೆ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ಇಲ್ಲಿನ ರಸ್ತೆಗಳಡಿಯಲ್ಲಿ ಹಲವು ರೀತಿಯ ಅನಿಲ ಸಂಪರ್ಕ ಹೊಂದಿದ್ದು, ಇದರಿಂದಲೇ ಅವಘಡ ಸಂಭವಿಸಿದೆ ಎನ್ನಲಾಗಿದೆ.