ವಾಷಿಂಗ್ಟನ್,ಜು 16 (DaijiworldNews/AK) ಅಮೆರಿಕದ ಅಲಾಸ್ಕಾದಲ್ಲಿ 7.4 ತೀವ್ರತೆಯಲ್ಲಿ ಭಾರೀ ಭೂಕಂಪ ಸಂಭವಿಸಿದೆ ಎಂದು ಅಮೇರಿಕಾ ಭೂವಿಜ್ಞಾನ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.
ಭೂಕಂಪ ಸಂಭವಿಸಿದ ಬಳಿಕ ಅಮೆರಿಕದ ಕೆಲವು ರಾಜ್ಯಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.. ಅಲಾಸ್ಕಾ ಪೆನಿನ್ಸುಲಾ, ಅಲ್ಯೂಟಿಯನ್ ದ್ವೀಪಗಳು ಹಾಗೂ ಕುಕ್ ಇನ್ಲೆಟ್ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅಲಾಸ್ಕಾ ಭೂಕಂಪ ಕೇಂದ್ರ ತಿಳಿಸಿದೆ.
ಭೂಕಂಪದ ಕೇಂದ್ರ ಬಿಂದುವನ್ನು 9.3 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ. ಆದರೆ ಭೂಕಂಪನದಿಂದ ಯಾವುದೇ ಸಾವು, ನೋವು, ಹಾನಿಯ ಬಗ್ಗೆ ವರದಿಯಾಗಿಲ್ಲ.