ವಾಷಿಂಗ್ಟನ್, ಜು 13 (DaijiworldNews/HR): ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರು ಹೊಸ ಕೃತಕ ಬುದ್ಧಿಮತ್ತೆಯ ಸ್ಟಾರ್ಟ್ ಅಪ್ ‘ಎಕ್ಸ್ಎಐ’ (xAI) ಕಂಪನಿಯನ್ನು ಪ್ರಾರಂಭಿಸಿದ್ದಾರೆ.
ಎಐ (AI) ಲೋಕದಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡಿದ್ದ ಓಪನ್ ಎಐನ ಚಾಟ್ ಜಿಪಿಟಿಗೆ ಸೆಡ್ಡು ಹೊಡೆಯಲು ಇದೀಗ ಮಸ್ಕ್ ಮುಂದಾಗಿ ಹೊಸ ‘ಎಕ್ಸ್ಎಐ’ (xAI) ಕಂಪನಿಯನ್ನು ಪ್ರಾರಂಭಿಸಿದ್ದಾರೆ.
ತನ್ನದೇ ಎಐ ಕಂಪನಿಯನ್ನು ಪ್ರಾರಂಭ ಮಾಡಿ ಮಾಹಿತಿಯನ್ನು ಹಂಚಿಕೊಂಡಿರುವ ಮಸ್ಕ್, ಸುರಕ್ಷಿತ ಎಐ ಅನ್ನು ನಿರ್ಮಿಸುವ ತನ್ನ ಯೋಜನೆಯನ್ನು ವಿವರಿಸಿದ್ದಾರೆ.
ಇನ್ನು ಮನುಷ್ಯರಿಗಿಂತಲೂ ಚುರುಕಾದ ಸೂಪರ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ಇನ್ನು ಕೇವಲ 5 ರಿಂದ 6 ವರ್ಷಗಳಲ್ಲಿ ಬರಲಿದೆ ಎಂದು ತಿಳಿಸಿದ್ದಾರೆ.