ವಾಷಿಂಗ್ಟನ್, ಜು 4 (DaijiworldNews/MS): ಸಾಲು ಸಾಲು ಷರತ್ತು ವಿಧಿಸಿ ಬಳಕೆದಾರರಿಗೆ ಕಿರಿಕಿರಿಯುಂಟು ಮಾಡುತ್ತಿರುವ ಮೈಕ್ರೋಬ್ಲಾಗಿಂಗ್ ವೇದಿಕೆ 'ಟ್ವಿಟರ್'ಗೆ ಪ್ರತಿಸ್ಪರ್ಧಿಯಾಗಿ ಮೆಟಾ ಕಂಪನಿ “ಥ್ರೆಡ್ಸ್” ಆ್ಯಪ್ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.
ಇದು ಟ್ವಿಟ್ಟರ್ಗೆ ಪರ್ಯಾಯವಾದ ಹೊಸ ಆ್ಯಪ್ ಎನ್ನಲಾಗುತ್ತಿದೆ. ಥ್ರೆಡ್ಸ್ ಅನ್ನು ಬಳಕೆದಾರರು ಇನ್ಸ್ಟಾಗ್ರಾಮ್ ಅಕೌಂಟ್ಗೆ ಲಿಂಕ್ ಮಾಡುವ ಮೂಲಕ ಈ ನೂತನ ಆ್ಯಪ್ ನ್ನು ಬಳಕೆ ಮಾಡಬಹುದು.
ಥ್ರೆಡ್ಸ್ ಜುಲೈ 6ರಂದು ಲಭ್ಯವಾಗುವ ನಿರೀಕ್ಷೆ ಇದ್ದು ಟ್ವಿಟ್ಟರ್ ಮಾದರಿಯಲ್ಲೇ ಇರಲಿದೆ ಎನ್ನಲಾಗಿದೆ. ಬಳಕೆದಾರರು ನೋಡಬಹುದಾದ ಪೋಸ್ಟ್ಗಳ ಸಂಖ್ಯೆಯನ್ನೂ ಟ್ವಿಟ್ಟರ್ ತಾತ್ಕಾಲಿಕವಾಗಿ ಸೀಮಿತಗೊಳಿಸಲು ಪ್ರಾರಂಭಿಸಿದ್ದು ಇದು ಬಳಕೆದಾರರಿಗೆ ತೀವ್ರ ಕಿರಿಕಿರಿಯುಂಟು ಮಾಡಿದೆ.
ಈ ಆ್ಯಪ್ ಮೊದಲಿಗೆ ಆ್ಯಪಲ್ ಸ್ಟೋರ್ ನಲ್ಲಿ ಲಭ್ಯವಾಗಲಿದ್ದುಆದರೆ, ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಆ್ಯಪ್ ಬಗ್ಗೆ ಯಾವುದೇ ಮಾಹಿತಿಯಿಲ್ಲ.