ಮೆಕ್ಸಿಕೋ, ಜೂ 30 (DaijiworldNews/HR): ಮೆಕ್ಸಿಕೋದಲ್ಲಿ ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಸಿಯಸ್ಗೆ ತಲುಪಿದ ಪರಿಣಾಮ ಉಷ್ಣ ಅಲೆಯಿಂದಾಗಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಮೆಕ್ಸಿಕೊದಲ್ಲಿ ಕಳೆದ ಎರಡು ವಾರಗಳಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. ಕೆಲವು ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಬಹಳಷ್ಟು ಮಂದಿ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಇನ್ನು ಮೂರನೇ ಎರಡರಷ್ಟು ಸಾವುಗಳು ಜೂನ್ 18-24 ರ ವಾರದಲ್ಲಿ ಸಂಭವಿಸಿವೆ, ಉಳಿದವು ಹಿಂದಿನ ವಾರದಲ್ಲಿ ಸಂಭವಿಸಿವೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಈ ಶಾಖದ ಅಲೆಯಿಂದಾಗಿ ಓರ್ವ ಮೃತಪಟ್ಟಿದ್ದರು.