ನ್ಯೂಯಾರ್ಕ್,ಜೂ 27 (DaijiworldNews/MS): ಅಮೇರಿಕಾದ ಅತಿ ದೊಡ್ದ ನಗರ ನ್ಯೂಯಾರ್ಕ್ ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಗರದ ಮೇಯರ್ ಎರಿಕ್ ಆಡಮ್ಸ್ ಸೋಮವಾರ ಈ ಘೋಷಣೆ ಮಾಡಿದ್ದುಈ ಮಸೂದೆಗೆ ರಾಜ್ಯಪಾಲ ಕ್ಯಾಥಿ ಹೊಚುಲ್ ಇನ್ನಷ್ಟೇ ಅಂಕಿತ ಹಾಕಬೇಕಿದೆ.
ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಸೋಮವಾರ ರಜೆಯ ಬಗ್ಗೆ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ. ನ್ಯೂಯಾರ್ಕ್ ನಲ್ಲಿರುವ ಭಾರತೀಯರು ಒಳಗೊಂಡತೆ ದಕ್ಷಿಣ ಏಷ್ಯಾದವರಿಗೆ ಇದೊಂದು ಸಂತಸದ ಸಂಗತಿ ಎಂದು ಬಣ್ಣಿಸಿದ್ದಾರೆ.
ಭಾರತೀಯ ಮೂಲದವರಾಗಿರುವ ನ್ಯೂಯಾರ್ಕ್ ಸಂಸದೆ ಜೆನ್ನಿಫರ್ ರಾಜ್ ಕುಮಾರ್ ಅವರು ಇದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದ್ದರು.
ಈ ವರ್ಷ ನವೆಂಬರ್ 12ರಂದು ದೀಪಾವಳಿ ಭಾನುವಾರದಂದು ಬರುತ್ತಿದೆ. ಹೀಗಾಗಿ ಇದರ ಲಾಭ ಮುಂದಿನ ವರ್ಷದಿಂದ ಸಿಗಲಿದೆ.