ಟೆಕ್ಸಾಸ್, ಜೂ 27 (DaijiworldNews/MS): ಲಿಥಿಯಂ-ಐಯಾನ್ ಬ್ಯಾಟರಿ ಸೃಷ್ಟಿಕರ್ತ, ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಬಿ ಗುಡೆನಫ್(100) ಟೆಕ್ಸಾಸ್ನಲ್ಲಿ ನಿಧನರಾಗಿದ್ದಾರೆ.
ಆಧುನಿಕ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಎಲೆಕ್ಟ್ರಿಕ್ -ಹೈಬ್ರಿಡ್ ಕಾರುಗಳಿಗೆ ವಿದ್ಯುತ್ ಮೂಲವಾದ ಲಿಥಿಯಂ-ಐಯಾನ್ ಬ್ಯಾಟರಿಯ ರಚನೆಗೆ ಗಮನಾರ್ಹ ಕೊಡುಗೆಗಾಗಿ ಗುಡ್ನಫ್ಗೆ 2019ರಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು.
ನೊಬೆಲ್ ಪಡೆದವರ ಪಟ್ಟಿಯಲ್ಲಿ ಜಾನ್ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. 1922ರಲ್ಲಿ ಹುಟ್ಟಿದ್ದ ಇವರು ಅಮೆರಿಕದಲ್ಲಿ ನೆಲೆಸಿ ಸಾಕಷ್ಟು ಸಂಶೋಧನೆಗಳನ್ನು ಮಾಡಿದ್ದರು. ಗುಡ್ನಫ್ ಸುಮಾರು 40 ವರ್ಷಗಳ ಕಾಲ ಟೆಕ್ಸಾಸ್ನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು