ಮಾಸ್ಕೋ, ಜೂ 24 (DaijiworldNews/MS): ರಷ್ಯಾದ ಅರ್ಧದಷ್ಟು ಸೇನೆ ತಮ್ಮೊಂದಿಗೆ ಸೇರಲು ಸಿದ್ಧವಾಗಿದೆ ಎಂದು ರಷ್ಯಾದ ಖಾಸಗಿ ಮಿಲಿಟರಿ ಕಂಪನಿಯಾದ ವ್ಯಾಗ್ನರ್ ಪಡೆ ಮುಖ್ಯಸ್ಥ ಪ್ರಿಗೊಜಿನ್ ಹೇಳಿದ್ದಾರೆ.
ತನ್ನ ಪಡೆ ಉಕ್ರೇನ್ನಿಂದ ರಷ್ಯಾ ಗಡಿ ತಲುಪಿರುವುದಾಗಿ ಹೇಳಿರುವ ಅವರು, ರಷ್ಯಾದ ಮಿಲಿಟರಿಯಿಂದ 60ರಿಂದ 70 ಸೈನಿಕರು ವ್ಯಾಗ್ನರ್ ಪಡೆಗೆ ಸೇರಿದ್ದಾರೆ.ನಮ್ಮ ಪಡೆ ಈಗಾಗಲೇ ಉಕ್ರೇನ್ನಿಂದ ರಷ್ಯಾ ಗಡಿ ಪ್ರವೇಶಿಸಿದೆ. ದಕ್ಷಿಣ ಮಿಲಿಟರಿ ಕೇಂದ್ರವಾದ ರಾಸ್ತಾವಾನ್ ಡಾನ್ ಪಟ್ಟಣವನ್ನುವಶಪಡಿಸಿಕೊಂಡಿದ್ದು, ನಮ್ಮ ದಾರಿಯಲ್ಲಿ ಏನೇ ಅಡ್ಡ ಬಂದರೂ ಅದನ್ನು ನಾಶಪಡಿಸುವುದಾಗಿ ಅಧ್ಯಕ್ಷ ಪುಟಿನ್ಗೆ ಪ್ರಿಗೊಜಿನ್ ಸವಾಲು ಹಾಕಿದ್ದಾರೆ.
ವ್ಯಾಗ್ನರ್ ಪಡೆ ಮುಖ್ಯಸ್ಥ 62 ವರ್ಷದ ಯೆವ್ಗೆನಿ ಪ್ರಿಗೋಜಿನ್ , ಉಕ್ರೇನ್ ಮೇಲಿನ ದಾಳಿಯನ್ನು ಮುನ್ನಡೆಸಿದ್ದ. ಆದರೆ ಇದೀಗ ರಷ್ಯಾದ ಮಿಲಿಟರಿ ವಿರುದ್ದವೇ ದಂಗೆ ಎದ್ದಿದ್ದಾರೆ.