ವಾಷಿಂಗ್ಟನ್, ಜೂ 22 (DaijiworldNews/MS): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಮುಗಿಸಿ ಕಳೆದ ರಾತ್ರಿ ನೇರವಾಗಿ ಶ್ವೇತಭವನಕ್ಕೆ ತೆರಳಿದ ಪ್ರಧಾನಿ ಮೋದಿಯವರನ್ನು ಅಧ್ಯಕ್ಷ ಜೋ ಬೈಡನ್ ಮತ್ತು ಪತ್ನಿ ಜಿಲ್ ಬೈಡನ್ ಸ್ವಾಗತಿಸಿದರು.
ವಳಿಕ ಮೋದಿ ಆಗಮನಕ್ಕೆ ಅಮೆರಿಕ ಪ್ರಥಮ ಮಹಿಳೆ ಜಿಲ್ ಬೈಡನ್ ಮತ್ತು ಅವರ ತಂಡ ಭಾರತ ಪ್ರಾಂತ್ಯಕ್ಕೆ ಸಂಬಂಧಿಸಿದ ಸಂಗೀತ ಮೂಲಕ ಗೌರವ ಸೂಚಿಸಿದರು.
ಔತಣಕೂಟಕ್ಕೆ ಮುನ್ನ ಜಿಲ್ ಬೈಡನ್ ಅವರು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದಲ್ಲಿ (NSF) ಮೋದಿಯವರಿಗೆ ಆತಿಥ್ಯ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ವೇತಭವನದ ದಕ್ಷಿಣ ಭಾಗದ ಹುಲ್ಲುಗಾವಲಿನಲ್ಲಿ ಆಯೋಜಿಸಲಾದ ಔತಣಕೂಟದಲ್ಲಿ ಸಂಪೂರ್ಣ ಸಸ್ಯಾಹಾರವೇ ಮೆನುವಾಗಿತ್ತು.
ಇಂದು ಬೆಳಗ್ಗೆಯಿಂದ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷರು ಔತಣಕೂಟ ಮುಗಿಸಿ ಶ್ವೇತಭವನದಿಂದ ಬೀಳ್ಕೊಡುವ ವೇಳೆ ಪರಸ್ಪರ ಆಲಂಗಿಸಿಕೊಂಡಿದ್ದು, ಪರಸ್ಪರ ಕೊಟ್ಟುಕೊಂಡ ಉಡುಗೊರೆಗಳ ಫೋಟೋ, ವಿಡಿಯೊಗಳು ಹರಿದಾಡುತ್ತಿವೆ. ಪ್ರಧಾನಿಯವರು ಪ್ರಥಮ ಮಹಿಳೆಗೆ 7.5 ಕ್ಯಾರೆಟ್ ಹಸಿರು ವಜ್ರವನ್ನು ಬೆಳೆಸಿದ ಲ್ಯಾಬ್ ನ್ನು ಉಡುಗೊರೆಯಾಗಿ ನೀಡಿದರು