ಕತಾರ್, ಜೂ 20 (DaijiworldNews/MS): ಕತಾರ್ ಅನಿವಾಸಿಗಳಿಗೆ ಹಲವಾರು ಕ್ರೀಡಾ ಕೂಟಗಳನ್ನು ಆಯೋಜಿಸಿಕೊಂಡು ಬಂದಂತಹ ಎಂಎಫ್ಸಿ ಕ್ರಿಕೇಟರ್ಸ್ ಕತಾರ್ , ಅಂಡರ್-ಆರ್ಮ್ ಆಟಗಾರರಿಗೆ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಆರಂಭಿಸಿರುವ "ಕತಾರ್ ಅಂಡರ್-ಆರ್ಮ್ ಪ್ರೀಮಿಯರ್ ಲೀಗ್ ಸೀಸನ್-2" ನ್ನು ಜೂ.30 ಮತ್ತು ಜುಲೈ 1 ರಂದು ನಡೆಸಲಿದೆ
ಡೈನಾಮಿಕ್ ಸ್ಪೋರ್ಟ್ಸ್ ಕ್ರೀಡಾಂಗಣ, ದೋಹಾದಲ್ಲಿ ನಡೆಯಲಿರುವ ಪಂದ್ಯಾಟದಲ್ಲಿ 6 ತಂಡಗಳ 140ಕ್ಕೂ ಅಧಿಕ ಆಟಗಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.
ಈ ಕ್ರೀಡಾಕೂಟದ ಮುಖ್ಯಪ್ರಾಯೋಜಕರಾಗಿ ಎಂ.ಚಿದಾನಂದ ನಾಯ್ಕ್(M.PALLONJI), ಅದೇ ರೀತಿ ಸಹಪ್ರಾಯೋಜಕರಾಗಿ ಅಬ್ದುಲ್ಲಾ ಮೋನು(EURO PARTS QATAR), ರವಿಶೆಟ್ಟಿ(ತುಳುಕೂಟ QATAR), ಅಸ್ಮತ್ ಅಲಿ(GOLDEN TRADING QATAR), ಕುಶಾಲ್ ಕುಮಾರ್(NAMAK CAFE QATAR), ತೌಫೀಕ್(CAPTURE FURNITURE) ಶುಭ ಹಾರೈಸಿದ್ದಾರೆ.
ಈ ಕ್ರೀಡಾಕೂಟದ ಅಂಗವಾಗಿ ಕಳೆದ ಶುಕ್ರವಾರ ಡೈನಾಮಿಕ್ ಸ್ಪೋರ್ಟ್ಸ್ ಸಭಾಂಗಣದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮವು ನಡೆದಿತ್ತು. 6 ತಂಡಗಳ ನಾಯಕರು, ವ್ಯವಸ್ಥಾಪಕರು ಭಾಗವಹಿಸಿ ಹರಾಜು ಪ್ರಕ್ರಿಯೆಯಲ್ಲಿ ಆಟಗಾರರನ್ನು ಖರೀದಿಸಿದರು. ಈ ಸಂದರ್ಭದಲ್ಲಿ ಅಬ್ದುಲ್ಲಾ ಮೋನು(EURO PARTS) ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರವಾಸಿಗಳಿಗೆ ಕ್ರಿಕೆಟ್ ಪಂದ್ಯಾಟದ ಮೂಲಕ ಮನೋರಂಜನೆಯನ್ನು ನೀಡುತ್ತಾ ಬಂದಿರುವ ಪಂದ್ಯಾಟದ ಆಯೋಜಕರಾಗಿರುವ ಸತ್ತಾರ್ ಮದಕ, ಸತ್ತಾರ್ ಮೆಲ್ಕಾರ್, ಹಕೀಮ್ ಮಾಡೂರ್, ಅಶ್ಫಾಕ್ ಬಜ್ಪೆ, ಅನ್ಸಾರ್ ಮದಕ ಎಂಎಫ್ಸಿ ಕ್ರಿಕೇಟರ್ಸ್ ಕತಾರ್ ನ ರೂವಾರಿಗಳಾಗಿದ್ದಾರೆ.