ಮಾಸ್ಕೋ, ಜೂ 17 (DaijiworldNews/MS): ಉಕ್ರೇನ್ನೊಂದಿನ ಯುದ್ಧದ ನಡುವೆಯೇ ಇದೀಗ ರಷ್ಯಾವು ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಗಡಿ ಪ್ರದೇಶವಾದ ಬೆಲಾರಸ್ಗೆ ಕಳುಹಿಸಿರುವುದಾಗಿ ಖುದ್ದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.
ಶುಕ್ರವಾರದಂದು ನೀಡಿದ್ದ ಪುಟಿನ್ ಹೇಳಿಕೆಯನ್ನು ದಿ ಹಿಲ್ ವರದಿ ಮಾಡಿದೆ. ಸೇಂಟ್ ಪೀಟರ್ಸ್ಬರ್ಗ್ ಇಂಟರ್ನ್ಯಾಶನಲ್ ಎಕನಾಮಿಕ್ ಫೋರಮ್ ಅನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ಬೇಸಿಗೆಯ ಅಂತ್ಯದ ವೇಳೆಗೆ ಉಳಿದ ಪರಮಾಣು ಶಸ್ತ್ರಾಸ್ತ್ರಗಳನ್ನು ತಲುಪಿಸಬೇಕು ಎಂದು ಸೂಚಿಸಿದ್ದಾರೆ.
ಅತ್ತ ಬೆಲಾರಸ್ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು ಕೂಡ, ನಾವು ರಷ್ಯಾದಿಂದ ಬಾಂಬ್ಗಳು ಹಾಗೂ ಕ್ಷಿಪಣಿಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ಇಬ್ಬರ ಹೇಳಿಕೆಯು ಇದೀಗ ಪರಮಾಣು ದಾಳಿ ಕುರಿತಂತೆ ಇಡೀ ಜಗತ್ತಿನಲ್ಲಿ ಆತಂಕ ಮೂಡಿಸಿದೆ. ಅಲ್ಲದೆ, ಈ ಬಾಂಬ್ಗಳು ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಬಳಸಲಾಗಿದ್ದ ಅಣ್ವಸ್ತ್ರಕ್ಕಿಂತ ಮೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ವರದಿಯಾಗಿದೆ.