ನ್ಯೂಯಾರ್ಕ್, ಜೂ 16 (DaijiworldNews/MS): ಅಮೆರಿಕನ್ ನಟ ಅಲ್ ಪಸಿನೊ 83ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದಾರೆ. ತಮ್ಮ 29 ವರ್ಷದ ಪ್ರಿಯತಮೆ ನೂರ್ ಅಲ್ಫಾಹ್ ಅವರ ಮೂಲಕ ಗಂಡು ಮಗು ಪಡೆದಿದ್ದಾರೆ.
ಮಗುವಿಗೆ, ರೋಮನ್ ಪೆಸಿನೋ ಎಂದು ನಾಮಕರಣ ಮಾಡಿದ್ದು, ಪೆಸಿನೋ ಅವರಿಗೆ ಇದು ನಾಲ್ಕನೇ ಮಗುವಾಗಿದೆ. ಇತರ ಇಬ್ಬರು ಪ್ರಿಯತಮೆಯರಿಂದ ಆಂಟೊನ್, ಒಲಿವಿಯಾ ಹಾಗೂ ಜೂಲಿ ಮಾರಿ ಎನ್ನುವ ಮೂರು ಮಕ್ಕಳನು ಪಡೆದಿದ್ದಾರೆ.
ಈವರೆಗೆ ಮದುವೆಯೇ ಆಗದ ಪೆಸಿನೋ 2022ರಲ್ಲಿ ಅಲ್ಫಲ್ಲಾಹ್ ಅವರನ್ನು ಭೇಟಿ ಮಾಡಿದ್ದು, ಆಗಿನಿಂದಲೇ ಇವರಿಬ್ಬರ ಮಧ್ಯೆ ಲವ್ ಗಸಿಪ್ ಹರಿದಾಡುತ್ತಿತ್ತು. ಅಲ್ಫಲ್ಲಾಹ್ ಅವರು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅಕಾಡೆಮಿ ಅವಾರ್ಡ್ ವಿನ್ನರ್ ಆಗಿರುವ ನಟ ದಿ ಐರೀಷ್ಮ್ಯಾನ್ ದಿ ಗಾಡ್ಫಾದರ್ , ಹೀಟ್,ಒನ್ಸ್ ಅಪಾನ್ ಅ ಟೈಮ್ ಇನ್ ಹಾಲಿವುಡ್ ಹೀಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.