ನಾಸಾ, ಜೂ 15 (DaijiworldNews/MS): ನಾಸಾ ಸಂಸ್ಥೆಯು ಮಂಗಳ ಗ್ರಹದ ಬೆಳಗ್ಗೆ ಮತ್ತು ಮಧ್ಯಾಹ್ನ ನಂತರದ ವೀಕ್ಷಣೆಯನ್ನು ಸೆರೆ ಹಿಡಿದಿರುವ ಅಪರೂಪದ ಚಿತ್ರವನ್ನು ಹಂಚಿಕೊಂಡಿದೆ.
ಇದು ನಾಸಾದ ಕ್ಯೂರಿಯಾಸಿಟಿ ಮಾರ್ಸ್ ರೋವರ್ನಿಂದ ಮಾರ್ಕರ್ ಬ್ಯಾಂಡ್ ವ್ಯಾಲಿಯಿಂದ ತೆಗೆದ ಎರಡು ಪ್ರತ್ಯೇಕ ಚಿತ್ರಗಳ ಸಂಯೋಜನೆಯಾಗಿದೆ. ಮೊದಲ ಚಿತ್ರವನ್ನು ಏಪ್ರಿಲ್ 8ರಂದು ಬೆಳಗ್ಗೆ 9:20ಕ್ಕೆ ಸೆರೆಹಿಡಿಯಲಾಗಿದೆ. ಆದರೆ 2ನೇ ಚಿತ್ರವನ್ನು ಸ್ಥಳೀಯ ಮಂಗಳ ಗ್ರಹದ ಸಮಯ ಮಧ್ಯಾಹ್ನ 3:40ಕ್ಕೆ ತೆಗೆಯಲಾಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
ಮಾರ್ಕರ್ ಬ್ಯಾಂಡ್ ವ್ಯಾಲಿ ಇದು ಗೇಲ್ ಕ್ರೇಟರ್ನೊಳಗೆ 3 ಮೈಲಿಗಳು (5 ಕಿಲೋಮೀಟರ್) ಎತ್ತರದಲ್ಲಿದೆ. ಅಲ್ಲಿ ರೋವರ್ 2012 ರಲ್ಲಿ ಇಳಿದಾಗಿನಿಂದ ಅನ್ವೇಷಣೆಯಲ್ಲಿ ತೊಡಗಿದೆ. ಅದರ ಟ್ರ್ಯಾಕ್ಗಳ ಆಚೆಗಿನ ದೂರದಲ್ಲಿ ಮಾರ್ಕರ್ ಬ್ಯಾಂಡ್ ವ್ಯಾಲಿ ಇದೆ, ಇದು ಅಂಕುಡೊಂಕಾದ ಪ್ರದೇಶವಾಗಿದೆ.