ಲಾಹೋರ್, ಜೂ13 (DaijiworldNews/HR): ಪಾಕಿಸ್ತಾನದಲ್ಲಿ ಅರಾಜಕತೆ ಅಂತ್ಯವಾಗಿದೆ ಎಂದು ನವಾಜ್ ಷರೀಫ್ ಮಗಳು ಮರಿಯಂ ನವಾಜ್ ಹೇಳಿದ್ದಾರೆ.
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಬೆನ್ನಲ್ಲೇ ವಾಗ್ದಾಳಿ ನಡೆಸಿರುವ ಮರಿಯಂ ನವಾಜ್, ಹಿಂಸಾಚಾರದ ಬಳಿಕ ಹಲವು ಮುಖಂಡರು ನಾಯಕರು ಇಮ್ರಾನ್ ಪಕ್ಷ ತೊರೆದಿದ್ದಾರೆ. ಈಗ ಇಡೀ ವಿರೋಧ ಪಕ್ಷ ಒಂದು ರಿಕ್ಷಾದಲ್ಲಿ ಕೂರಬಹುದು ಎಂದಿದ್ದಾರೆ.
ಇನ್ನು ಮೇ 9ರ ಹಿಂಸಾಚಾರದ ನಂತರ ಇಮ್ರಾನ್ ಪಕ್ಷವಾದ 'ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್' ಅಥವಾ ಪಿಟಿಐಗೆ ಸೇರಿದ ಹಲವು ನಾಯಕರನ್ನ ಒಳಗೆ ಹಾಕಲಾಗಿದ್ದು, ಅದರಲ್ಲೂ ಹಿಂಸೆಗೆ ಇವರೇ ಕಾರಣ ಎಂದು ಪಿಟಿಐ ಪಕ್ಷದ ನಾಯಕರು ಮತ್ತು ಮುಖಂಡರನ್ನ ಉಗ್ರರ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಭಯಗೊಂಡು ಹಲವರು ಇಮ್ರಾನ್ ಖಾನ್ ಪಕ್ಷ ಬಿಟ್ಟು ಎಸ್ಕೇಪ್ ಆಗಿದ್ದಾರೆ.