ಲಂಡನ್, ಜೂ 10 (DaijiworldNews/MS): ಬ್ರಿಟನ್ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಧಿಡೀರ್ ಆಗಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಕೋವಿಡ್ ಸಾಂಕ್ರಮಿಕದ ವೇಳೆ ಜಾರಿಯಲ್ಲಿದ್ದ ನಿಯಮಾವಳಿಗಳನ್ನು ನಿರ್ಬಂಧಿಸಿ ಪಾರ್ಟಿ ಆಯೋಜಿಸಿದ್ದ ಬಗ್ಗೆ ಬ್ರಿಟನ್ನ ಹೌಸ್ ಆಫ್ ಕಾಮನ್ಸ್ ಗೆ ತಪ್ಪು ಮಾಹಿತಿ ನೀಡಿದ್ದರು ಎಂಬ ಆರೋಪದ ಕುರಿತು ತನಿಖೆ ನಡೆಯುತ್ತಿದೆ. ಈ ಆರೋಪದ ಬಗ್ಗೆ ಸಂಸದೀಯ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಶಿಕ್ಶೆಗೆ ಗುರಿಯಾಗುವ ಸಾಧ್ಯತೆಯಿಂದ ರಾಜಕೀಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಕಾಡುತ್ತಿರುವ ಮಧ್ಯೆಯೇ ಸಂಸತ್ ಸದಸ್ಯತ್ವ ತೊರೆದಿದ್ದಾರೆ.
"ಸಂಸತ್ ತ್ಯಜಿಸುತ್ತಿರುವುದು ಸದ್ಯಕ್ಕಂತೂ ಅತೀವ ಬೇಸರ ತಂದಿದೆ , ನಾನು ಸುಳ್ಳು ಹೇಳುತ್ತಿಲ್ಲ, ಪಿತೂರಿ ಮಾಡುತ್ತಿಲ್ಲ " ಎಂದು ಜಾನ್ಸನ್ ಹೇಳಿಕೆ ನೀಡಿದ್ದಾರೆ. ರಾಜೀನಾಮೆಯಿಂದ ತೆರವಾಗುವ ಅವರ ಸ್ಥಾನಕ್ಕೆ ಉಪ ಚುನಾವಣೆ ನಡೆಯಬೇಕಾಗಿದೆ.