ಉಗಾಂಡಾ, ಜೂ 09 (DaijiworldNews/HR): 102 ಮಕ್ಕಳು, 578 ಮೊಮ್ಮಕ್ಕಳನ್ನು ಹೊಂದಿರುವ ವ್ಯಕ್ತಿಯೊಬ್ಬ ಇನ್ನೂ ಮುಂದೆ ಮಕ್ಕಳಾಗದಂತೆ 12 ಪತ್ನಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ಮುಂದಾಗಿದ್ದಾರೆ.
ಉಗಾಂಡಾದ ಲುಸಾಕಾದ 68 ವರ್ಷದ ಮೂಸಾ ಹಸಹ್ಯಾ ಕಸೆರಾ ಎಂಬ ಹೆಸರಿನ ವ್ಯಕ್ತಿಗೆ 12 ಪತ್ನಿಯರು ಸೇರಿದಂತೆ 102 ಮಕ್ಕಳು ಹಾಗೂ 578 ಮೊಮ್ಮಕ್ಕಳಿದ್ದಾರೆ.
ಇನ್ನು ಮುಂದಕ್ಕೆ ಈತನಿಗೆ ಮಕ್ಕಳಾಗದಿರಲು ತನ್ನ 12 ಮಡದಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
1972 ರಲ್ಲಿ ತಮ್ಮ ಮೊದಲ ಹೆಂಡತಿಯನ್ನು ಮದುವೆಯಾದಾಗ ಮೂಸಾ ಅವರಿಗೆ ಕೇವಲ 17 ವರ್ಷ ವಯಸ್ಸು. ಇದಾದ ಬಳಿಕ ಅವರ ಕುಟುಂಬ ಮತ್ತು ಸಂಬಂಧಿಕರು ಹೆಚ್ಚಿನ ಮಹಿಳೆಯರನ್ನು ಮದುವೆಯಾಗಲು ಮತ್ತು ಅವರ ಕುಟುಂಬವನ್ನು ವಿಸ್ತರಿಸಲು ಸಲಹೆ ನೀಡಿದ್ದರು. ಅದಕ್ಕಾಗಿ ಅವರು 12 ಮಹಿಳೆಯರನ್ನು ವಿವಾಹ ಆಗಿದ್ದಾನೆ ಎನ್ನಲಾಗಿದೆ.