ಕೈರೋ, ಜೂ 04 (DaijiworldNews/MS): ತೈಲ ಸಾಗಿಸುತ್ತಿದ್ದ ಹಡಗು ಭಾನುವಾರ ಈಜಿಪ್ಟ್ನ ಸೂಯೆಜ್ ಕಾಲುವೆಯ ಏಕಪಥದ ಭಾಗದಲ್ಲಿ ಕೆಟ್ಟು ನಿಂತ ಪರಿಣಾಮ, ಜಾಗತಿಕ ಜಲಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಯಾಗಿ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡು ವಿಶ್ವ ಮಟ್ಟದಲ್ಲಿ ಆತಂಕ ಎದುರಾಗಿತ್ತು.
ಕಾಲುವೆಯ 12 ಕಿಲೋಮೀಟರ್ (7.5 ಮೈಲಿ) ಮಾರ್ಕ್ನಲ್ಲಿ ಮಾಲ್ಟಾದ ತೈಲ ಸಾಗಣೆ ಹಡಗು 'ಸೀವಿಗೋರ್' ಯಾಂತ್ರಿಕ ದೋಷದಿಂದ ಕೆಟ್ಟುನಿಂತಿತ್ತು ಎಂದು ಸುಯೆಜ್ ಕಾಲುವೆ ಪ್ರಾಧಿಕಾರದ ವಕ್ತಾರ ಜಾರ್ಜ್ ಸಫ್ವಾತ್ ಹೇಳಿದ್ದಾರೆ.
ಟ್ಯಾಂಕರ್ ಅನ್ನು ಕಾಲುವೆಯ ದ್ವಿಪಥದ ಭಾಗಕ್ಕೆ ಎಳೆಯಲು ಮೂರು ಟಗ್ಬೋಟ್ಗಳನ್ನು ನಿಯೋಜಿಸಲಾಯಿತು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ತೈಲ ಟ್ಯಾಂಕರ್ ಅನ್ನು ಬೇರೆಡೆಗೆ ಎಳೆದು, ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಹಡಗಿನ ದುರಸ್ಥಿ ಕಾರ್ಯ ನಡೆಯುತ್ತಿದೆ ಎಂದು ಕಾಲುವೆ ಪ್ರಾಧಿಕಾರ ಹೇಳಿದೆ.