ಅಮೇರಿಕಾ, ಮೇ 27(DaijiworldNews/MS): ಜನಪ್ರಿಯ ಆನ್ಲೈನ್ ವಿಡಿಯೋ ಹಂಚಿಕೆ ಪ್ಲಾಟ್ಫಾರ್ಮ್ ಯೂಟ್ಯೂಬ್ ಜೂನ್ 26ರಿಂದ ಸ್ಟೋರಿಸ್ ಫೀಚರ್ ಅನ್ನು ಸ್ಥಗಿತಗೊಳಿಸಲಿದೆ.
ಬಳಕೆದಾರರಿಗೆ ಆ ದಿನದಿಂದ ಯಾವುದೇ ಹೊಸ ಸ್ಟೋರಿಸ್ ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಅಸ್ತಿತ್ವದಲ್ಲಿರುವ ಪೋಸ್ಟ್ಗಳು ಕೂಡ ಏಳು ದಿನಗಳ ನಂತರ ಲಭ್ಯವಿರುವುದಿಲ್ಲ. 10,000 ಚಂದಾದಾರರನ್ನು ಹೊಂದಿರುವ ಬಳಕೆದಾರರಿಗೆ ಸ್ಟೋರೀಸ್ ಲಭ್ಯವಿವೆ. 2017 ರಲ್ಲಿ ಯೂಟ್ಯೂಬ್ ಸ್ಟೋರಿ ಫೀಚರ್ಸ್ ಅನ್ನು ಪರಿಚಯಿಸಿತ್ತು.
ಯೂಟ್ಯೂಬ್ ಸ್ಟೋರೀಸ್ ಫೀಚರ್ಸ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ ಕಾರಣ ಮತ್ತು ಹೆಚ್ಚು ಬಳಕೆ ಮಾಡುತ್ತಿರುವ ಕಾರಣ ಇದನ್ನು ಸ್ಥಗಿತಗೊಳಿಸಿದೆ.
ಇನ್ನು ಯೂಟ್ಯೂಬ್ ಕಮ್ಯೂನಿಟಿ ಪೋಸ್ಟ್ಗಳು ಮತ್ತು ಶಾರ್ಟ್ಸ್ ಅವಲಂಬನೆಯತ್ತ ಯೂಸರ್ಗಳನ್ನು ಉತ್ತೇಜಿಸಲು ಈ ಕ್ರಮ ಕೈಗೊಂಡಿದೆಯಂತೆ.