ಲಂಡನ್, ಮೇ 25(DaijiworldNews/MS): ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬಳಿಯಿದ್ದ ಖಡ್ಗ ಬರೋಬ್ಬರಿ 145 ಕೋಟಿ ರೂ.ಗೆ ಮತ್ತೊಮ್ಮೆ ಹರಾಜು ಆಗಿದೆ.
ಮದ್ಯದ ದೊರೆ ವಿಜಯ್ ಮಲ್ಯ ಅವರು ಬ್ರಿಟೀಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004ರಲ್ಲಿ ಹರಾಜಿನಲ್ಲಿ ಖರೀದಿ ಮಾಡಿದ್ದರು.
ಇದೀಗ ಈ ಖಡ್ಗ ಮತ್ತೆ ಹರಾಜು ಆಗಿದ್ದು, ಅನಾಮಧೇಯ ವ್ಯಕ್ತಿಯ ಪರವಾಗಿ ಬೋನ್ಹ್ಯಾಮ್ ಹರಾಜು ಸಂಸ್ಥೆ ಲಂಡನ್ನಲ್ಲಿ ಅದನ್ನು ಖರೀದಿಸಿರುವುದಾಗಿ ವರದಿಯಾಗಿದೆ. ಗೌಪ್ಯತೆ & ಸುರಕ್ಷತೆ ದೃಷ್ಟಿಯಿಂದ ಹರಾಜು ಪಡೆದವರ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಸಂಸ್ಥೆ ಹೇಳಿದೆ.
ಖಡ್ಗ ಖರೀದಿಸಿದ ಬಳಿಕ ಮದ್ಯದ ದೊರೆಯಾಗಿದ್ದ ಮಲ್ಯ ಕುಟುಂಬಕ್ಕೆ ಕೆಟ್ಟಕಾಲ ಆಂಭವಾಗಿತ್ತು ಎಂಬ ಮಾತು ಕೇಳಿಬಂದಿತ್ತು.
1799ರಲ್ಲಿನಡೆದ 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಮರಣ ಹೊಂದಿದಾಗ ಅವರ ಅರಮನೆಯಲ್ಲಿ ಪತ್ತೆಯಾಗಿದ್ದ ಖಡ್ಗವನ್ನು ಲೂಟಿ ಮಾಡಿ ಹೋಗಿದ್ದ ಬ್ರಿಟಿಷ್ ಸೇನೆ ಮೆಜರ್ ಜನರಲ್ ಬೇರ್ಡೆಗೆ ಅರ್ಪಿಸಿತ್ತು.