ಇಸ್ಲಾಮಾಬಾದ್, ಮೇ 17 (DaijiworldNews/MS): ಪಾಕಿಸ್ತಾನದ ಉನ್ನತ ನ್ಯಾಯಾಲಯ ಮೇ 9 ರ ನಂತರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ದಾಖಲಾಗಿರುವ ಯಾವುದೇ ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ ಹೊರಡಿಸಿದ್ದ ಆದೇಶವನ್ನು ಮೇ 31 ರವರೆಗೆ ವಿಸ್ತರಿಸಿದೆ.
70 ವರ್ಷದ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲು ಸರ್ಕಾರಿ ವಕೀಲರು ಹೆಚ್ಚಿನ ಸಮಯ ಕೋರಿದ ನಂತರ ಇಸ್ಲಾಮಾಬಾದ್ ಹೈಕೋರ್ಟ್ ಈ ತೀರ್ಪು ನೀಡಿದೆ.
ಸರ್ಕಾರಿ ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದೆ
ಮೇ 9 ರಂದು ಇಸ್ಲಾಮಾಬಾದಿನ ಹೈಕೋರ್ಟ್ ಹೊರಗೆ ಅರೆಸೈನಿಕ ಫೆಡರಲ್ ಕಾನೂನು ಜಾರಿ ದಳ ರೇಂಜರ್ಸ್ ಖಾನ್ರನ್ನು ನಾಟಕೀಯವಾಗಿ ಬಂಧಿಸಿರುವುದನ್ನು ಸುಪ್ರೀಂ ಕೋರ್ಟ್ "ಅಮಾನ್ಯ ಮತ್ತು ಕಾನೂನುಬಾಹಿರ" ಎಂದು ಬಣ್ಣಿಸಿತ್ತು.