ನವದೆಹಲಿ,ಮೇ11(DaijiworldNews/KH):ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿದ ಅವರ ಬೆಂಬಲಿಗರು ಪ್ರತಿಭಟನೆ ಮೂಲಕ ಭಾರಿ ಹೈಡ್ರಾಮಾವನ್ನೇ ಸೃಷ್ಟಿಸಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ರೇಡಿಯೋ ಬ್ರಾಡ್ಕಾಸ್ಟರ್ ಕಚೇರಿಗೂ ಬೆಂಕಿ ಹಚ್ಚಿದಲ್ಲದೇ, ಟ್ವಿಟ್ಟರ್ ಮೂಲಕ ವಿಡಿಯೋಗಳನ್ನ ಪೋಸ್ಟ್ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ತಾನ ಹೊತ್ತಿ ಉರಿಯುತ್ತಿದೆ. ದೇಶಾದ್ಯಂತ ಪ್ರತಿಭಟನೆ, ದೊಂಬಿ, ಗಲಭೆಗಳು ನಡೆಯುತ್ತಿವೆ. ಸಂಘರ್ಷಗಳಲ್ಲಿ ಇದುವರೆಗೂ ಆರು ಮಂದಿ ಮೃತಪಟ್ಟಿದ್ದಾರೆ. ಇಮ್ರಾನ್ ಖಾನ್ ಬೆಂಬಲಿಗರ ಆಕ್ರೋಶ ಈಗ ಪಾಕ್ ಸೇನೆಯ ಕಡೆಗೆ ತಿರುಗಿದೆ. ಗಲಭೆ ತೀವ್ರಗೊಳ್ಳುವ ಭೀತಿಯಿಂದ ಅನೇಕ ಕಡೆ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದಿದೆ.
ಖಾನ್ ಬಂಧನ ಖಂಡಿಸಿ ಪೇಶಾವರ, ಇಸ್ಲಾಮಾಬಾದ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ದೃಶ್ಯಗಳು ಅಂತರಿಕ್ಷಾದಲ್ಲಿರುವ ಉಪಗ್ರಹಗಳು ಚಿತ್ರಗಳ ಮುಖೇನ ಸೆರೆ ಹಿಡಿದಿದೆ.ಇಮ್ರಾನ್ ಖಾನ್ ಅವರನ್ನು ಬಂಧಿಸಲು ಆದೇಶ ಹೊರಡಿಸಿ,ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾದ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್ಎಬಿ) ಮಾಜಿ ಪ್ರಧಾನಿಯನ್ನು 10 ದಿನಗಳ ಕಾಲ ಕಸ್ಟಡಿಗೆ ಕಳುಹಿಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿತ್ತು ಎಂದು ಎಎಫ್ಪಿ ವರದಿ ಮಾಡಿದೆ. ಮುಂದಿನ ವಿಚಾರಣೆ ಮೇ 17 ರಂದು ನಡೆಯಲಿದೆ.