ಕ್ಯಾಲಿಫೋರ್ನಿಯಾ, ಮೇ 10 (DaijiworldNews/MS): ಗೂಗಲ್ ನ ವಾರ್ಷಿಕ ಡೆವಲಪರ್ ಸಮ್ಮೇಳನ 'Google I/O 2023' ಇಂದು ರಾತ್ರಿ 10:30ರಿಂದ ಕ್ಯಾಲಿಫೋರ್ನಿಯಾದಲ್ಲಿ ಕಾರ್ಯಕ್ರಮ ನಡೆಯಲಿದೆ.
ಗೂಗಲ್ 2008ರಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು ಇದರಲ್ಲಿ ಕಂಪನಿಯ ಹೊಸ ಗ್ಯಾಜೆಟ್ & ತಂತ್ರಜ್ಞಾನದ ಅಪ್ಡೇಟ್ಗಳನ್ನು ರಿಲೀಸ್ ಮಾಡಲಾಗುತ್ತದೆ. ಅದರಂತೆ ಕಂಪನಿಯು ಬಹುನಿರೀಕ್ಷಿತ Google Pixel 7A ಸ್ಮಾರ್ಟ್ಫೋನ್, Google Pixel Fold ಸ್ಮಾರ್ಟ್ಫೋನ್, Google Pixel ಟ್ಯಾಬ್ಲೆಟ್, Android 14 ಆಪರೇಟಿಂಗ್ ಸಿಸ್ಟಮ್ ಮತ್ತು Google AI ವೈಶಿಷ್ಟ್ಯಗಳನ್ನು ಪರಿಚಯಿಸಬಹುದು ಎಂದು ವರದಿಯಾಗಿದೆ.
ಗೂಗಲ್ನ ಚೊಚ್ಚಲ ಮಡಚುವ ಫೋನ್ ಪಿಕ್ಸೆಲ್ ಫೋಲ್ಡ್ ಮಾರುಕಟ್ಟೆಗೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ. ಆದರೆ, ಕಂಪನಿ ಈ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ.