ನವದೆಹಲಿ, ಏ 19 (DaijiworldNews/HR): ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ಆ ಮೂಲಕ ಇದೀಗ ನೆರೆಯ ದೇಶ ಚೀನಾವನ್ನೇ ಹಿಂದಿಕ್ಕಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವಸಂಸ್ಥೆಯ ವರದಿ ಪ್ರಕಾರ, ಭಾರತ ಕೋಟಿ ಜನಸಂಖ್ಯೆ ಹೊಂದಿದ್ದರೆ, ಚೀನಾ 142.57 ಕೋಟಿ ಜನಸಂಖ್ಯೆ ಹೊಂದಿದೆ. ಭಾರತದ ಜನಸಂಖ್ಯೆಯ ಸುಮಾರು 1/4 ರಷ್ಟು ಜನರು 14 ವರ್ಷದ ಒಳಗಿನವರಾಗಿದ್ದಾರೆ. ಜನಸಂಖ್ಯೆಯ ಶೇಕಡಾ 68ರಷ್ಟು ಜನರು 15 ರಿಂದ 64 ವಯಸ್ಸಿನವರಾಗಿದ್ದರೆ, ಶೇಕಡಾ 7ರಷ್ಟು ಜನರು 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.
ಇನ್ನು ಚೀನಾದಲ್ಲಿ ವಯಸ್ಕರ ಪ್ರಮಾಣ ಹೆಚ್ಚಿದ್ದರೆ, ಭಾರತ ಯುವ ಶಕ್ತಿಯಿಂದ ಕೂಡಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ಮಕ್ಕಳ ಜನನ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದೆ. ವಯಸ್ಕರ ಪ್ರಮಾಣದಲ್ಲಿ ಏರಿಕೆಯಾಗಿದೆ.